ಹುಬ್ಬಳ್ಳಿ : ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ, ಅನೇಕ ಬಾರಿ ಆಗಿವೆ ಎಂಬುವುದು ಹಲವರ ನಂಬಿಕೆ.
ರಾಜಕೀಯ ಕುರಿತು, ಮಳೆ-ಬೆಳೆ, ಸಾವು-ನೋವುಗಳು, ವಿಶ್ವಕ್ಕೆ ಮಾರಕವಾಗುವ ಕಾಯಿಲೆಗಳು, ಪ್ರಳಯ ಹೀಗೆ ಹಲವು ವಿಷಯಗಳ ಕುರಿತಂತೆ ಶ್ರೀಗಳು ಆಗಾಗ ಸೂಕ್ಷ್ಮವಾಗಿಯೇ ತಮ್ಮ ನುಡಿಗಳಲ್ಲಿ ಭವಿಷ್ಯ ನುಡಿಯುತ್ತಿರುತ್ತಾರೆ.
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಬದಲಾವಣೆ, ಅಧಿಕಾರದ ಹಂಚಿಕೆ ಮಾತುಗಳು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಣದ ನಾಯಕರ ಬೇಡಿಕೆ, ದಲಿತ ಸಿಎಂ, ಸಿಎಂ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣಗಳ ನಾಯಕರ ಬಹಿರಂಗ ಹೇಳಿಕೆಗಳು.. ಇತರೆ ರಾಜ್ಯ ರಾಜಕಾರಣದ ಚರ್ಚೆಗಳ ಕುರಿತು ಶ್ರೀಗಳು ಭವಿಷ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಯಾವ ಸಮಸ್ಯೆಗಳು ಸದ್ಯಕ್ಕೆ ಆಗುವ ಲಕ್ಷಣಗಳು ಇಲ್ಲ. ಪ್ರಸ್ತುತ ಯಾವ ತೊಂದರೆ, ಬೆಳವಣಿಗೆಗಳು ಸರ್ಕಾರದ ಮಟ್ಟದಲ್ಲಿ ಆಗಲ್ಲ. ಯುಗಾದಿ ಬಳಿಕವೇ ಎಲ್ಲವನ್ನೂ ವಿವರವಾಗಿ ಹೇಳುವೆ ಎಂದಿರುವ ಶ್ರೀಗಳ ಮಾತುಗಳು ಕುತೂಹಲ ಮೂಡಿಸುವೆ.
ಯುಗಾದಿ ನಂತದಲ್ಲಿ ರಾಜ್ಯದಲ್ಲಿ ಶುಭ ಮತ್ತು ಅಶುಭ ದಿನಗಳೂ ಎದುರಾಗಲಿವೆ. ಈಗ ಸವಿಸ್ತಾರವಾಗಿ ಹೇಳಲ್ಲ. ಅಲ್ಲದೇ ಈ ಬಾರಿ ಬಿಸಿಲು ಹೆಚ್ಚಳವಾಗಲಿದ್ದು, ಅಪಾಯಕಾರಿ ಧಗೆಯಿಂದ ದುಷ್ಪರಿಣಾಮ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಪರೋಕ್ಷವಾಗಿ ನುಡಿದರು.




