Ad imageAd image

ವಯಸ್ಸಿನ ಅಂತರ ವಿಷಯ ನಿಮಗ್ಯಾಕೆ  ಸಲ್ಮಾನ್ ಖಾನ್ ಪ್ರಶ್ನೆ

Bharath Vaibhav
ವಯಸ್ಸಿನ ಅಂತರ ವಿಷಯ ನಿಮಗ್ಯಾಕೆ  ಸಲ್ಮಾನ್ ಖಾನ್ ಪ್ರಶ್ನೆ
WhatsApp Group Join Now
Telegram Group Join Now

ಹುನಿರೀಕ್ಷಿತ ‘ಸಿಕಂದರ್​​’,​ ಇದೇ ಭಾನುವಾರ ತೆರೆಗಪ್ಪಳಿಸಲಿದೆ. ಇದೇ ಮೊದಲ ಬಾರಿ, ಬಾಲಿವುಡ್​ ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​​ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಸಿನಿಮಾ ಘೋಷಣೆಯಾದಾಗಿನಿಂದಲೂ ಹಲವು ವಿಚಾರಗಳಿಂದ ಸಖತ್​ ಸದ್ದು ಮಾಡುತ್ತಾ ಬಂದಿದೆ. ಮುಖ್ಯಭೂಮಿಕೆಯಲ್ಲಿರುವ ನಟ ನಟಿಯ ವಯಸ್ಸಿನ ಅಂತರ ಕೂಡಾ ನೆಟ್ಟಿಗರ ಚರ್ಚೆಯ ವಿಷಯಗಳಲ್ಲೊಂದಾಗಿದೆ​. ಅದಕ್ಕೀಗ ಸ್ವತಃ ನಾಯಕ ನಟನೇ ಪ್ರತಿಕ್ರಿಯಿಸಿದ್ದಾರೆ.

‘ಸಿಕಂದರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ಗೆ ಅಭಿಮಾನಿಗಳಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೇಲರ್ ರಿಲೀಸ್​​​ ಈವೆಂಟ್​ನಲ್ಲಿ, ಸಲ್ಮಾನ್ ಖಾನ್ ಮಾಧ್ಯಮದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭ, ತಮ್ಮ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಏಜ್​​ ಡಿಫ್ರೆನ್ಸ್​​ ಬಗ್ಗೆಯೂ ಮಾತನಾಡಿದ್ದಾರೆ.

ಸಲ್ಮಾನ್ಪ್ರಶ್ನೆಗೆ ನಾಚಿ ನೀರಾದ ರಶ್ಮಿಕಾ31 ವರ್ಷ ಏಜ್​ ಗ್ಯಾಪ್​ ಇದ್ದು, ಚಿತ್ರದಲ್ಲಿ ರೊಮ್ಯಾನ್ಸ್​​ ಮಾಡಿರುವ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ಗಳಾಗಿವೆ. ಈ ಬಗ್ಗೆ ಮಾತನಾಡುತ್ತಾ, ‘ನಾಯಕಿಗೆ ಯಾವುದೇ ಸಮಸ್ಯೆ ಇಲ್ಲ, ನಾಯಕಿಯ ತಂದೆಗೆ ಯಾವುದೇ ಸಮಸ್ಯೆ ಇಲ್ಲ ಅಂದ ಮೇಲೆ ನಿಮಗೇಕೆ ಸಮಸ್ಯೆ’ ಎಂದು ಸಲ್ಮಾನ್​​ ಪ್ರಶ್ನಿಸಿದರು. ರಶ್ಮಿಕಾ ಅವರ ಮದುವೆ ಆಗುತ್ತೆ, ಹೆಣ್ಣು ಮಗು ಜನಿಸುತ್ತದೆ, ಅವರು ದೊಡ್ಡವರಾದ ಮೇಲೆ ಅವರೊಂದಿಗೂ ಕೆಲಸ ಮಾಡುತ್ತೇನೆ. ತಾಯಿಯ ಅನುಮತಿ ಸಿಗುತ್ತಲ್ವಾ? ಎಂದು ರಶ್ಮಿಕಾ ಬಳಿ ನೋಡಿ ಪ್ರಶ್ನಿಸಿದಾಗ ನಟಿ ನಾಚಿ ನೀರಾದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

WhatsApp Group Join Now
Telegram Group Join Now
Share This Article
error: Content is protected !!