ಐಗಳಿ: ದೇಶಸೇವೆ ಮಾಡುತ್ತಿದ್ದ ಐಗಳಿ ಗ್ರಾಮದ ಯುವ ಸೈನಿಕ (ಅಗ್ನಿವೀರ) ಕಿರಣರಾಜ್ ಕೇದಾರ ತೆಲಸಂಗ (23) ಅವರು ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನವು ಇಡೀ ಗ್ರಾಮ ಮತ್ತು ಕುಟುಂಬದವರಲ್ಲಿ ತೀವ್ರ ಶೋಕವನ್ನು ತಂದಿದೆ.
ಕೇವಲ 15 ತಿಂಗಳ ಹಿಂದೆ( ಅಗ್ನಿವೀರ ) ಭಾರತೀಯ ಸೇನೆಗೆ ಸೇರಿಕೊಂಡಿದ್ದ ಕಿರಣರಾಜ್ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುವ ಮಹಾದಾಸೆಯನ್ನು ಹೊಂದಿದ್ದರು. ಐದು ತಿಂಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದು ಹೋಗಿದ್ದ ಅವರು, ಮಂಗಳವಾರ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಇಡೀ ಗ್ರಾಮವೇ ದುಃಖತಪ್ತವಾಗಿದೆ.
ಪಂಜಾಬ್‌ನಿಂದ ಪಾರ್ಥಿವ ಶರೀರ ಆಗಮನ: ಯೋಧನ ಪಾರ್ಥಿವ ಶರೀರವು ಪಂಜಾಬ್‌ನಿಂದ ಬುಧವಾರ ಸಂಜೆ ವೇಳೆಗೆ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಸುದ್ದಿ ಕೇಳಿದ ತಕ್ಷಣ, ಕಿರಣರಾಜ್ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ತಂದೆ-ತಾಯಿ, ಸಹೋದರರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ದೇಶಕ್ಕಾಗಿ ಪ್ರಾಣ ತೆತ್ತ ಯುವ ಯೋಧನಿಗೆ ಗೌರವ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದಾರೆ. ಇಡೀ ಗ್ರಾಮವೇ ದುಃಖತಪ್ತವಾಗಿದೆ.
ಅಗ್ನಿವೀರ ಯೋಧ ಕಿರಣರಾಜ್ ಹೃದಯಾಘಾತದಿಂದ ನಿಧನ: ಐಗಳಿ ಗ್ರಾಮದಲ್ಲಿ ಶೋಕ




