ರಾಯಚೂರು : -ಸಾಗುವಳಿ ರೈತರಿಗೆ ಭೂ ಮುಂಜೂರಾತಿ ನೀಡಲು ಒತ್ತಾಯಿಸಿ.”ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ” ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ. ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿರುವವರ ಮೇಲೆ ಭೂಕಬಳಿಕೆ ಆರೋಪ ಹೋರಿಸಿ ಒಕ್ಕಲೆಬ್ಬಿಸುವ ಸರ್ಕಾರದ ನಿರ್ಧಾರ ಖಂಡನೀಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಶೀಘ್ರವೇ ಭೂ ಮಂಜೂರಾತಿ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಭೂ ಕಬಳಿಕೆ ತಡೆ ಕಾಯ್ದೆಯಡೆ ಸಣ್ಣ ರೈತರ ಮೇಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಗ್ರಾಮವಾರ ಸರ್ವೆ ನಡೆಸಿ ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ಭೂಮಿ ಹಂಚಿಕೆ ಮಾಡಬೇಕು ಲಕ್ಷಾಂತರ ರೈತರು ವರ್ಷಾನುಗಟ್ಟಲೆ ಬಿತ್ತಿ ಬೆಳದು ಆಹಾರ ಉತ್ಪಾದನೆಗೆ ಗಣನೀಯ ಕೊಡುಗೆ ನೀಡುತ್ತಿದ್ದರು ಬಹುತೇಕರಿಗೆ ಜಮೀನು ಪಟ್ಟ ದೊರೆಯದೇ ಸರ್ಕಾರಿ ಇಲಾಖೆಗೆ ಇಂದಿಗೂ ಅಲೆದಾಡುತ್ತಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 94 / ಸಿ- 94. ಸಿಸಿ. ಅರ್ಜಿ ಸಲ್ಲಿಸಿದವರಿಗೆ ನಿವೇಶನ ಹಕ್ಕುಪತ್ರ ನೀಡಿ 20 – 30 ವರ್ಷಗಳಿಂದ ಸಾಗುವಳೆ ಮಾಡುವ ಭೂಮಿಗೆ ಪಟ್ಟ ನೀಡಬೇಕು ಭೂಮಿ ಮಂಜೂರಾತಿಗೆ ಕಮಿಟಿ ರಚನೆ ಮಾಡಿ ಫಾರಂ -57 ರಡಿ ಭೂಮಿಗೆ ಪುನಃ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಬೇಕು ಎಂದು ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಸಂಚಾಲಕ ನಾಗರಾಜ ಪೂಜಾರಿ. ಒತ್ತಾಯಿಸಿದ್ದಾರೆ
ಈ ಸಂದರ್ಭದಲ್ಲಿ – ಸಿಪಿಐ.ಎಂಎಲ್. ರಾಜ್ಯ ಸಮಿತಿ ಸದಸ್ಯ.. ಪಿಪಿ. ಅಪ್ಪಣ್ಣ.. ಆರ್.ಎಚ್. ಕಲ್ಮಂಗಿ.. ಪರಶುರಾಮ್ ಭಂಡಾರಿ.. ಬಸವರಾಜ ಬೆಳಗುರ್ಕಿ.. ನರಸಮ್ಮ.. ಹನುಮಮ್ಮ.. ವೀರೇಶ್. ನಾಯಕ್.. ಬಸವರಾಜ. ಹಿರೇದಿನ್ನಿ.. ಇನ್ನು ಅನೇಕರಿದ್ದರು.
ವರದಿ:- ಬಸವರಾಜ ಬುಕ್ಕನಹಟ್ಟಿ