Ad imageAd image

ಎಐ ದೈತ್ಯ ಆಂಥ್ರೋಪಿಕ್ ಕಂಪನಿ ಬೆಳಗಾವಿ ಐಟಿ ಕಂಪನಿ ದೂರು : ಸಮನ್ಸ್ ಜಾರಿ

Bharath Vaibhav
ಎಐ ದೈತ್ಯ ಆಂಥ್ರೋಪಿಕ್ ಕಂಪನಿ ಬೆಳಗಾವಿ ಐಟಿ ಕಂಪನಿ ದೂರು : ಸಮನ್ಸ್ ಜಾರಿ
WhatsApp Group Join Now
Telegram Group Join Now

ಬೆಳಗಾವಿ: ಜಾಗತಿಕ ವಲಯದಲ್ಲಿ ಟೆಕ್ ಕಂಪನಿಗಳಿಗೆ ಆಘಾತ ನೀಡಿರುವ ಎಐ ದೈತ್ಯ ಆಂಥ್ರೋಪಿಕ್ ಕಂಪನಿ ಬೆಂಗಳೂರಿನಲ್ಲಿ ತನ್ನ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿದೆ. ಇದು ಭಾರತದ ಮೊದಲ ಹಾಗೂ ಏಷ್ಯಾ ಖಂಡದಲ್ಲಿ ಆಂಥ್ರೋಪಿಕ್ ನ ಮೂರನೇ ಕಚೇರಿಯಾಗಿದೆ.

ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ(ಎಐ) ಪ್ರಮುಖ ಸಂಸ್ಥೆ ಆಂಥ್ರೋಪಿಕ್ ಪಿಬಿಸಿ ವಿರುದ್ಧ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿ ಕಂಪನಿ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ತನ್ನ ಬ್ರಾಂಡ್ ಹೆಸರು ಮತ್ತು ಆನ್ಲೈನ್ ಗುರುತನ್ನು ರಕ್ಷಿಸುವ ಕಾನೂನುಗಳನ್ನು ಅಮೆರಿಕ ಮೂಲದ ಸಂಸ್ಥೆ ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಬೆಳಗಾವಿ ಆಜಂ ನಗರದಲ್ಲಿರುವ ಆಂಥ್ರೋಪಿಕ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಆಯಾಜ್ ಮುಲ್ಲಾ ದೂರು ನೀಡಿದ್ದಾರೆ.

ಅಮೆರಿಕ ಮೂಲದ ಆಂಥ್ರೋಪಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಮ್ಮದೇ ಹೆಸರನ್ನು ಹೊಂದಿದ್ದು, ಆಂಥ್ರೋಪಿಕ್ ನ ಪ್ರಾಥಮಿಕ ಹಕ್ಕನ್ನು ನಮಗೆ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ನ್ಯಾಯಾಧೀಶ ಮಂಜುನಾಥ್ ನಾಯಕ್ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಮಾರ್ಚ್ 9 ರಂದು ಕೋರ್ಟಿಗೆ ಹಾಜರಾಗುವಂತೆ ಬೆಂಗಳೂರಿನಲ್ಲಿರುವ ಆಂಥ್ರೋಪಿಕ್ ಪಿಬಿಸಿಗೆ ನೋಟಿಸ್ ನೀಡಿದ್ದಾರೆ.

ಹೆಸರು ಮತ್ತು ಬ್ರಾಂಡ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಐ ಕಂಪನಿ ಆಂಥ್ರೋಪಿಕ್ ಗೆ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಬೆಳಗಾವಿ ಮೂಲದ ಸಾಫ್ಟ್ವೇರ್ ಕಂಪನಿ ಆಂಥ್ರೋಪಿಕ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ 2017ರಲ್ಲಿ ಭಾರತದಲ್ಲಿ ನೋಂದಾಯಿಸಲ್ಪಟ್ಟಿದೆ.

7 ವರ್ಷಕ್ಕೂ ಹೆಚ್ಚು ಕಾಲ ಐಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ 2021 ರಲ್ಲಿ ಸಂಯೋಜಿಸಲಾದ ಕ್ಯಾಲಿಫೋರ್ನಿಯಾ ಮೂಲದ ಅಂಥ್ರೋಪಿಕ್ ಪಿಬಿಸಿ ಭಾರತದಲ್ಲಿ ಆಂಥ್ರೋಪಿಕ್ ಹೆಸರು ಮತ್ತು ಬ್ರಾಂಡ್ ಅಡಿ ಐಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೀಗಾಗಿ ಆಂಥ್ರೋಪಿಕ್ ಬ್ರಾಂಡ್ ಹೆಸರಲ್ಲಿ ಅಮೆರಿಕ ಮೂಲದ ಕಂಪನಿಯ ಎಲ್ಲಾ ಸೇವೆಗಳನ್ನು ಭಾರತದಲ್ಲಿ ನಿಲ್ಲಿಸಲು ನಿರ್ದೇಶನ ನೀಡಬೇಕು ಎಂದು ಮೊಹಮ್ಮದ್ ಅಯಾಜ್ ಮುಲ್ಲಾ ದೂರು ಸಲ್ಲಿಸಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ ನಾಯಕ್ ಆಂಥ್ರೋಪಿಕ್ ಬೆಂಗಳೂರು ಕಚೇರಿ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಸ್ ಅವರಿಗೆ ಸಮನ್ಸ್ ಜಾರಿ ಮಾಡಿ ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!