ಐಗಳಿ: ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 12-09-2025 ರಂದು ಹಾಲಳ್ಳಿ ಗ್ರಾಮದ ಅಮಸಿದ್ದ ಹಣಮಂತ ಪೂಜಾರಿ ಅವರಿಗೆ ಒಬ್ಬ ಮಹಿಳೆ ಮತ್ತು ಮೂರು ಜನ ಗಂಡಸರು ಸೇರಿ ನಮಗೆ ಹಣ ನೀಡಿದರೆ ನಿಮಗೆ ಡಬಲ್ ಹಣ ನೀಡುತ್ತೇವೆ ಎಂದು ನಂಬಿಸಿ ಅಮಸಿದ್ದ ಅವರ ಬಿಳಿ ಇದ್ದ 1750,000/ ಹಣ ತೆಗೆದುಕೊಂಡು ವಾಪಸ್ ಬ್ಯಾಗ್ ನಲ್ಲಿ ಹಳೆ ಬಟ್ಟೆಗಳನ್ನು ತುಂಬಿ ಇದರಲ್ಲಿ 3400000 ಲಕ್ಷ ರೂ. ಇದೆ ಮನೆ ಒಳಗೆ ಹೋಗಿ ನೋಡಿಕೊಳ್ಳಿರಿ ಎಂದು ನಂಬಿಸಿ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿ ಟೊಯೋಟಾ ಕಾರನಲ್ಲಿ ಪರಾರಿಯಾಗಿದ್ದರು ಈ ಕುರಿತು ಅಮಸಿದ್ದ ಪೂಜಾರಿ ಅವರು 13-09-2025 ರಂದು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದರು ಐಗಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ ೧೨೮/೨೦೨೫ ಕಲಂ ೩೧೬(೨),೩೧೮(೪) ಭಾರತೀಯ ನ್ಯಾಯ ಸಂಹಿತೆ ೨೦೨೩ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ಈ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಎಸ್ಪಿ ಅವರು ಗಂಭೀರವಾಗಿ ಪರಿಗಣಿಸಿ ಡಿಎಸ್ಪಿ ಅಥಣಿ ಡಿಎಸ್ಪಿ ಚಿಕ್ಕೋಡಿ ಸಿಪಿಐ ಅಥಣಿ ಇವರ ನೇತೃತ್ವದಲ್ಲಿ ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಸಾಗನೂರ್ (ಕಾ,ಸು) ಕುಮಾರ ಹಾಡಕಾರ ಪಿಎಸ್ಐ (ಅ,ವಿ) ಸಿಬ್ಬಂದಿಗಳಾದ ಪಿ ಎನ್ ಕುರಿ. ಎಸ್ ಎ ಸೇಖ. ಡಿ ಟಿ ಶಾನವಾಡ ಎಸ್ ಎನ್ ಸನಗೊಂಡ . ಎಸ್ ಬಿ ಚೌಹಾನ್ ಎಸ್ ಬಿ ಹರಿಗಿ. ಎಸ್ ಎಲ್ ಕತ್ತಿ .ಜಿಲ್ಲಾ ತಾಂತ್ರಿಕ ವಿಭಾಗದ ವಿನೋದ್ ಟಕ್ಕಣ್ಣವರ್ ಒಳಗೊಂಡ ತಂಡವನ್ನು ರಚಿಸಿದರು.

ಈ ತಂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರಲ್ಲಿ ಆರೋಪಿತರಾದ ಎ೧ ಮೇಹರೂನ ಅಲ್ತಾಫ್ ಸರ್ಕಾವಸ್ ವಯಸ್ಸು ೪೮ ಸಾ!! ಘಟಪ್ರಭಾ ಮಲ್ಲಾಪುರ್ ಪಿಜಿ ಹಾಲಿ!! ಕೊಲ್ಹಾಪುರ ಜವ್ಹಾರ ನಗರ ಸಾಯಿ ಮಂದಿರ ಹತ್ತಿರ ಮಾಧುರಿ ಪೊವಲ ಇವರ ಮನೆ ಎ೨ ಆರೋಪಿ ಇಮಾಮಸಾಬ ರಾಜೀಸಾಬ ದರೂಬಾಯಿ ವಯಸ್ಸು ೩೪ ಸಾ. ಕಮಡೊಳಿ ತಾ. ಕುಂದರಗೊಳ ಜಿ.ಧಾರವಾಡ. ಎ೩ ಆರೋಪಿ ಅಕ್ಷಯ್ ಶಾಂತಿನಾಥ್ ಅವಟಿ ವಯಸ್ಸು ೩೦ ಸಾ. ಡಿಗ್ರಜ ತಾ .ಮಿರಜ ಜಿ.ಸಾಂಗಲಿ ಎ೪ ಆರೋಪಿ ವಿಶ್ವಾಸ್ ಹರಿ ಪಾಟೀಲ್ ವಯಸ್ಸು ೪೦ ಸಾ. ಪೊಹಾಲಿ ಬ ತಾ. ಪನ್ನಾಳ ಜಿ. ಕೊಲ್ಹಾಪೂರ ಈ ನಾಲ್ಕು ಆರೋಪಗಳನ್ನು ದಿನಾಂಕ 17 -9 -2025 ರಂದು ದಸ್ತಗಿರಿ ಮಾಡಿ ಆರೋಪಿತರಿಂದ ತೆಗೆದುಕೊಂಡು ಹೋಗಿದ್ದ ರೋಕ್ ಹಣ 17 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ ಟೊಯೋಟಾ ಇಟಿಯೋಸ್ ಕಾರ್ ಗಾಡಿಯನ್ನ ವಶಪಡಿಸಿಕೊಂಡಿರುತ್ತಾ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಇವರು ಸೋಮವಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ ಈ ಪ್ರಕರಣದಲ್ಲಿ ಐಗಳಿ ಪೊಲೀಸ್ ಠಾಣೆ ಪಿಎಸ್ಐಗಳು ಹಾಗೂ ಸಿಬ್ಬಂದಿಗಳ ಕಾರ್ಯಚಾರಣೆಕ್ಕೆ ಎಸ್ಪಿ ಅವರು ಪ್ರಶಂಸೆ ವ್ಯಕ್ತಿಪಡಿಸಿರುತ್ತಾರೆ.





