Ad imageAd image

ಐನಾಪುರದಲ್ಲಿ ಪ್ರತಿಭಾ ಕಾರಂಜಿ

Bharath Vaibhav
ಐನಾಪುರದಲ್ಲಿ ಪ್ರತಿಭಾ ಕಾರಂಜಿ
WhatsApp Group Join Now
Telegram Group Join Now

ಐನಾಪುರ: ಗ್ರಾಮೀಣ ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಎಂಬ ಸರಕಾರದ  ಯೋಜನೆಯ ಕಾರ್ಯಕ್ರಮವು ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕೆಂದು ಐನಾಪೂರ ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ, ಶಾಲೆಯ ಅಧ್ಯಕ್ಷ ಅರುಣ ಗಾಣಿಗೇರ  ಹೇಳಿದರು.

 

ಅವರು ದಿ 6ರಂದು ಗುರುವಾರ ತಾಲ್ಲೂಕಿನ ಐನಾಪುರ  ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಶಾಲಾ ಆವರಣದಲ್ಲಿ   ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಲಯ ಕಾಗವಾಡ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ದ್ವೀಪಬೆಳಗಿಸುವದರೊಂದಿಗೆಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಒಂದಿಲ್ಲೊಂದು ಕ್ಷೇತ್ರದಲ್ಲಿ ಪ್ರತಿಭೆ ಹೊಂದಿರುತ್ತಾರೆ ಆದರೆ ಪ್ರತಿಭೆ ಹೊರಬರುವದಿಲ್ಲ ಆದರದಿಂದ ಸರಕಾರ ಮಕ್ಕಳಿಗಾಗಿ ಇಂತಹ ವೇದಿಕೆಗಳನ್ನು ನಿರ್ಮಾಣ ಮಾಡಿದು ವಿದ್ಯಾಥಿಗಳು ತಮ್ಮ ಪ್ರತಿಭೆಗಳನ್ನು ಪರಿಶ್ರಮದಿಂದ ಮಾಡಿದರೆ ಖಂಡಿತವಾಗಿ ಯಶಸ್ಸು ಸಿಗುತ್ತದೆ ಎಂದ ಅವರು ಮಕ್ಕಳು ಒಳ್ಳೆಯ ಶಿಕ್ಷಣ, ಪಡೆದು ಪ್ರತಿಭಾವಂತ ರಾಗೂವದರೊಂದಿಗೆ ಆಟದಲ್ಲಿ, ಶಾರೀರಿಕವಾಗಿ ಮಾನಸಿಕವಾಗಿ ಸದೃಡವಾಗಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ ಜೆ ಮಾಲಗಾಂವ ಮಾತನಾಡುತ್ತಾ ಮಕ್ಕಳಲ್ಲಿ ಅತ್ಯಂತ ಅಡಕವಾಗಿರುವ ಪ್ರತಿಭೆಯ ಇದೆ ಆ ಪ್ರತಿಭೆಯನ್ನು ಪ್ರಪಂಚಕ್ಕೆ ತೊರಿಸುವ ಮೂಲಕ ರಾಷ್ಟ್ರದ ನಿರ್ಮಾಣ ಮಾಡಬೇಕಾಗಿದೆ.ಎಂದ ಅವರು
ಮಕ್ಕಳು ಪ್ರತಿಭಾವಂತರಾಗಿ ದೇಶ ಬೀಟು ಹೊಗಬಾರದು ಹಾಗೂ ಪ್ರತಿಭೆ ನಾಡಿಗೆ ಪ್ರಯೋಜನವಾಗಲಿ ಎಂದು ರಾಷ್ಟ್ರತನ್ನ ಸಂಪನ್ಮೂಲ ಇಂತಹ ವೇದಿಕೆಗೆ ವಿನಿಯೋಗ ಮಾಡಿದೆ ಅದರ ಸದುಪಯೋಗ ಪಡೆದುಕೋಳಬೇಕೆಂದರು ಅಧ್ಯಕ್ಷತೆಯನ್ನು ಸಂಸ್ಥೆ ಹಿರಿಯ ಸದಸ್ಯ ಬಿ.ಎ.ಪಾಟೀಲ ವಹಿಸಿದ್ದರು.

ಇ ಸಂದರ್ಭದಲ್ಲಿ ಅಥಣಿ ಹಾಗು ಕಾಗವಾಡ ಬಿಸಿಯೋಟ ಯೋಜನಾಧಿಕಾರಿ ಮಲ್ಲಿಕಾರ್ಜುನ ನಾಮದಾರ,ಪಪಂ ಅಧ್ಯಕ್ಷ ಕಸ್ತೂರಿ ಮಡಿವಾಳ, ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜಯ ಕುಚನೂರೆ,ಉಪಾಧ್ಯಕ್ಷ ರವೀಂದ್ರ ಬಣಜವಾಡ, ಪ್ರಮೋದ ಲಿಂಬಿಕಾಯಿ,ಗಜಕುಮಾರ ಪಾಟೀಲ, ಮೋಹನ ಪಾಟೀಲ, ವಸಂತ ಹುದ್ದಾರ,ಭರತೇಶ ತೇರದಾಳೆ, ಪ್ರಕಾಶ ಕೊರ್ಬು,ಗಿರೀಶ ಮಡಿವಾಳ, ಬಿ.ಎಸ್ ಹುವಣ್ಣವರ,ಪ್ರಧಾನ ಗುರುಗಳಾದ ಎಸ್ ಜೆ ಪಾಟೀಲ, ಎಂ ವ್ಹಿ ಮ್ಯಾಚು ,ಶಿಕ್ಷಕರು ವಿದ್ಯಾರ್ಥಿಗಳು ಇತರರು ಇದ್ದರು. ಶಿಕ್ಷಕರಾದ ರವಿಂದ್ರ ಬಡಿಗೇರ ನಿರೂಪಿಸಿದರು.ಸಿ ಆರ್ ಸಿ ಎ .ಎಸ್.ಖೋತ ಸ್ವಾಗತಿಸಿದರು. ಶಿಕ್ಷಕರಾದ ಎಸ್ ಜೆ ಪಾಟೀಲ ವಂದಿಸಿದರು.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!