ಹಾವೇರಿ : ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆರೋಪಿಸಿದ್ದ ಹಾವೇರಿ ಮಹಿಳೆಯ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಸಾಲದ ವಿಚಾರದ ಗಲಾಟೆಯನ್ನು ಡೈವರ್ಟ್ ಮಾಡೋಕೆ ಮಹಿಳೆ ಹೈಡ್ರಾಮಾ ಸೃಷ್ಟಿಸಿರೋದು ತನಿಖೆ ವೇಳೆ ಬಹಿರಂಗವಾಗಿದೆ.
ಸಾಲದ ವಿಚಾರಕ್ಕೆ ನಡೆದ ಗಲಾಟೆಗೆ ಫೀರಾಂಬಿ ಎನ್ನುವ ಮಹಿಳೆ ಅತ್ಯಾಚಾರದ ಕಥೆ ಕಟ್ಟಿದ್ದಾಳೆ ಎಂಬ ಅಂಶ ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ ವೇಳೆ ಮಹಿಳೆಯ ಕಳ್ಳಾಟ ಬಟಾಬಯಲಾಗಿದೆ.
ಐದು ಜನರಿಂದ ಗ್ಯಾಂಗ್ ರೇಪ್ ನಡೆದಿರುವುದಾಗಿ ಆಕೆ ಸುಳ್ಳುಕಥೆ ಸೃಷ್ಟಿಸಿದ್ದಳು. ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಯಾವುದೇ ರೇಪ್ ನಡೆದಿಲ್ಲ ಅನ್ನೋದು ಸಾಬೀತಾಗಿತ್ತು.
ಇದ್ರಿಂದ ಆತಂಕ ಗೊಂಡ ಫೀರಾಂಬಿ ಪೊಲೀಸರ ಬಳಿ ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ. ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾಳೆ.