Ad imageAd image

ವಿಮಾನ ನಿಲ್ದಾಣ ನಿರ್ಮಾಣ ಪರಿಸರ ಸಂರಕ್ಷಣೆ ಅಗತ್ಯ ಕ್ರಮ :ಜಿಲ್ಲಾಧಿಕಾರಿ ನಿತೀಶ್ ಕೆ 

Bharath Vaibhav
ವಿಮಾನ ನಿಲ್ದಾಣ ನಿರ್ಮಾಣ ಪರಿಸರ ಸಂರಕ್ಷಣೆ ಅಗತ್ಯ ಕ್ರಮ :ಜಿಲ್ಲಾಧಿಕಾರಿ ನಿತೀಶ್ ಕೆ 
WhatsApp Group Join Now
Telegram Group Join Now

ರಾಯಚೂರು :ಜಿಲ್ಲೆಯ ಜನರ ಬಹು ನಿರೀಕ್ಷಿತ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿ ಪರಿಸರ ಸಂರಕ್ಷಣೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ರವರು ತಿಳಿಸಿದರು .

ಅವರಿಂದು ನಗರದ ಯರಮರಸ್ ಹೊರವಲಯ ಸರ್ಕ್ಯುಟೋಸಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ರಾಯಚೂರು ತಾಲೂಕ ಮತ್ತು ರಾಯಚೂರು ಜಿಲ್ಲೆಯ ಏಗನೂರ್ ಮತ್ತು ದಂಡು ಗ್ರಾಮಗಳ 130.43 ಹೆಕ್ಟರ್ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ನೋ -ಫ್ರಿಲ್ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವ ಪರಿಸರ ಸಾರ್ವಜನಿಕ ಅಕಾಲಿಕ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಅಭಿವೃದ್ಧಿ ಮಂಡಳಿ ಮತ್ತು ಲೋಕೋಪಯೋಗಿ ಇಲಾಖೆ ವಿಮಾನ ನಿಲ್ದಾಣ ನಿರ್ಮಾಣ ಕೈಗೊತ್ತಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ವಲಯ ಏಗುನೂರು ದಂಡು ಚಿಕ್ಕ ಸೂಗೂರು ಸೇರಿದಂತೆ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಪರಿಸರ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಲಹೆ ಸೂಚನೆ ನೀಡುವಂತೆ ಸೂಚಿಸಿದರು.

ವಿಮಾನ ನಿಲ್ದಾಣ ಅನುಷ್ಠಾನದಿಂದ ಸುತ್ತಮುತ್ತ ಪ್ರದೇಶದಲ್ಲಿ ಪರಿಸರಕ್ಕೆ ಹಾನಿ ತಡೆಯುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ ಆದ್ದರಿಂದ ಇಲ್ಲಿ ನಿವಾಸಿಗಳ ಅಭಿಪ್ರಾಯ ಸಂಗ್ರಹಣೆ ಅವಶ್ಯಕತೆ ಸಲಹಾ ಸೂಚನೆ ಪಡೆದು ಪರಿಸರ ಮಾಲಿನ್ಯ ಹಾನಿ ನಿಯಂತ್ರಣ ಮಾಡುವ ಮೂಲಕ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದು ವಾಯು ಮಾಲಿನ್ಯ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.

ವಿಮಾನ ನಿಲ್ದಾಣ ನಿರ್ಮಾಣ ಹಂತ 13 ಕೋಟಿ ಮತ್ತು ಕಾಮಗಾರಿ ಪ್ರಾರಂಭದಲ್ಲಿ ಯಾವುದೇ ರೀತಿಯ ಪರಿಸರ ಮಾಲಿನ್ಯಕ್ಕೆ ಯಾವುದೇ ರೀತಿಯ ಹಾನಿ ಆಗದಂತೆ ಹದಿನಾರು ಕೋಟಿ ರೂಪಾಯಿ ವೆಚ್ಚ ಭರಿಸ ಲಗುತ್ತಿದೆ. ವಿಮಾನ ನಿರ್ಮಾಣ ಹಂತದಲ್ಲಿ ಭೂಮಿಗಾಳಿ ಮತ್ತು ನೀರು ವನ್ಯಜೀವಿಗಳಿಗೆ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಎಲ್ಲಾ ಕ್ರಮ ತೆಗೆದುಕೊಂಡಿದೆ.

ಈ ಸಂದರ್ಭದಲ್ಲಿ ಸಚಿವ ಎನ್ ಎಸ್ ಬೋಸರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಮುತುವರ್ಜಿಯಿಂದ ನಗರಕ್ಕೆ ವಿಮಾನ ನಿಲ್ದಾಣ ಸ್ಥಾಪನೆಗೆ ಅನುಮತಿ ದೊರೆತಿದೆ.
ಈ ಸಂದರ್ಭದಲ್ಲಿ ಸಸಹಾಯಕ ಆಯುಕ್ತರು ಗಜಾನನ ಬಾಳೆ.ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಮತ್ತು ಏಗನೂರ್ ಗ್ರಾಮದ ಮತ್ತು ದಂಡು ಗ್ರಾಮದ ಭೂ ಸಂತ್ರಸ್ತರು ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!