ಅಥಣಿ : ಅಥಣಿ ತಾಲೂಕಿನ ಐಗಳಿ ಗ್ರಾಮದ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದ ಪ್ರತಿಭಾವಂತ ಬಿಎಸ್ಸಿ ಕೃಷಿ ಪದವಿ ಪಡೆದು ಎಲೆ ಮರೆ ಕಾಯಿಯಂತೆ ಇದ್ದ ಸೈದಪ್ಪ ಪುಂಡಲಿಕ್ ಮಾದರ್ ಅವರು ರಾಜ್ಯದ ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವಿಜಯಪುರದ ಸಿಂಡಿಕೇಟ್ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿ ಆಶ್ಚರ್ಯ ಮೂಡಿಸಿದ್ದಾರೆ.
ಈಗಿನ ಕಾಲದಲ್ಲಿ ರಾಜಕೀಯ ನಾಯಕರ ಬೆಂಬಲವಿಲ್ಲದೆ ಏನೇನು ಸಾಧಿಸಲು ಸಾಧ್ಯವಿಲ್ಲ ಈ ವ್ಯಕ್ತಿ ಹಳ್ಳಿಯಲ್ಲಿ ಹುಟ್ಟಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಇದ್ದ ವ್ಯಕ್ತಿಯನ್ನು ಗುರುತಿಸಿ ಇಂದು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯದ ನಾಮ ನಿರ್ದೇಶನ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ .ಇದರಿಂದ ಐಗಳಿ ಗ್ರಾಮದ ಕೀರ್ತಿ ಹೆಚ್ಚಿಸಿದೆ. ಇವರ ತಂದೆ ಪುಂಡಲೀಕ್ ಮಾದರ್ ಖ್ಯಾತ ಹಲಗಿವಾದ ಕಲಾವಿದರಾಗಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಇವರ ಕುಟುಂಬದ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ಸೋದರಿ ಸರ್ಕಾರಿ ವಿವಿಧ ಇಲಾಖೆಯ ಸೇವೆಯಲ್ಲಿದ್ದಾರೆ. ಸಾಧನೆ ಮಾಡಿದ ಈ ಕುಟುಂಬಕ್ಕೆ ಗ್ರಾಮಸ್ಥರು ಹಾಗೂ ಸಾಹಿತ್ಯಗಳು ರಾಜಕೀಯ ನಾಯಕರು ಸಂಘ ಸಂಸ್ಥೆಯ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿಷ್ಠಿತ ಸಿಂಧೂರ್ ವಸ್ತಿ ಶ್ರೀ ಅಪ್ಪಯ್ಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಿದ್ದಾರೆ ಈ ಸಂದರ್ಭದಲ್ಲಿ ಪೂಜ್ಯ ಅಡವಯ್ಯ ಸ್ವಾಮಿಗಳು ಯಕಂಚಿ ಪೂಜ್ಯ ಗಂಗಾಧರ್ ಸ್ವಾಮಿಗಳು ಕೊಕಟನೂರ ಸಿದಗೌಡ ಪಾಟೀಲ್ ಹಿರಿಯ ಪತ್ರಕರ್ತರಾದ ಮಲಗೌಡ ಪಾಟೀಲ್ _ಶಿಕ್ಷಕರಾದ ಸದಾಶಿವ್ ಜನಗೌಡರ್ ಕೆ ಎಸ್ ಬಿರಾದಾರ್ ಭೀಮಣ್ಣ ಸಿಂಧೂರ್ ಅರ್ಚಕರಾದ ಸದಾಶಿವ ಸಿಂಧೂರ್ ರಾಜಕುಮಾರ್ ವಾಗ್ಮೊರೆ ಸೇರಿದಂತೆ ಇತರರು ಇದ್ದರು
ವರದಿ:- ಆಕಾಶ ಎಂ