ಸಾವಿರಾರು ಭಕ್ತರಿಂದ ಹರಕೆ ಪೂರೈಕೆ, ದೇವಿ ದರ್ಶನ,.
ನಿಪ್ಪಾಣಿ: ದು ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲಾಪುರದ ಕರವೀರ, ನಿವಾಸಿನಿ, ಆದಿಲಕ್ಷ್ಮಿ, ಮಹಾಮಾಯಿ, ಮಹಾಲಕ್ಷ್ಮಿಗೆ ಅಕ್ಷಯ ತೃತೀಯದಂದು ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಿತು.
ಮಂದಿರದ ಮುಖ್ಯ ಅರ್ಚಕರಾದ ಮಾಧವ್ ಮುನೀ ಶ್ವರ BV 5 ನ್ಯೂಸ್ ಪ್ರತಿನಿಧಿಯೊಂದಿಗೆ ಮಹಾಲಕ್ಷ್ಮಿಯ ವಿವಿಧ ರೂಪಗಳಲ್ಲಿಯ ಅದರಲ್ಲೂ ಅಕ್ಷಯ ತೃತೀಯದಂದು ನಡೆದ ಧ ನ, ಧಾನ್ಯಲಕ್ಷ್ಮಿ,ಸಂತಾನ ಲಕ್ಷ್ಮಿ ಅಷ್ಟಲಕ್ಷ್ಮಿ ಗಜಲಕ್ಷ್ಮಿ ಸೇರಿದಂತೆ ವಿವಿಧ ಹಬ್ಬಗಳoದು ನಡೆಯುವ ವಿವಿಧ ರೂಪಗಳಲ್ಲಿ ಪೂಜೆ ಧಾರ್ಮಿಕ ಕೈಂಕರ್ಯ ಕುರಿತು ಮಾಹಿತಿ ನೀಡಿದರು. ಅಕ್ಷಯ ತೃತೀಯದಂದು ತೊಟ್ಟಿಲಲ್ಲಿ ಹಾಕಿ ಮಹಾಲಕ್ಷ್ಮಿಗೆ ನಾಮಕರಣ, ಕುಂಕುಮಾರ್ಚನೆ ಅಭಿಷೇಕ ಮಹಾಆರತಿ ಪೂಜೆಗಳು ಸಂಪನ್ನಗೊಂಡವು. ಅಕ್ಷಯ ತೃತೀಯ ದಿನದಂದು ಕರ್ನಾಟಕ ಮಹಾರಾಷ್ಟ್ರ ಗೋವಾ ಸೇರಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಮಹಾಲಕ್ಷ್ಮಿ ಮಂದಿರಕ್ಕೆ ಆಗಮಿಸಿ ಹರಕೆ ಪೂರೈಸಿ ದೇವಿಯ ದರ್ಶನ ಪಡೆದರು.
ಮಹಾವೀರ ಚಿಂಚಣೆ




