ಕಾರ್ಮಿಕರ ಗೋಳು ಕೇಳೋರ್ಯಾರು ಅಧಿಕಾರಿಗಳ
ಎಡವಟ್ಟು ಮನೆಗೆ ನುಗ್ಗಿದ ಕೊಳಚೆ ನೀರು
ಕಾರ್ಮಿಕರ ಕಾಲೋನಿಗಳಿಗೆ ಮಲ ಮೂತ್ರದ ನೀರು ಮನೆ ನುಗ್ಗಿರುವದರಿಂದ
ಕಾರ್ಮಿಕ ಕುಟುಂಬಸ್ಥರು ಅನುಭವಿಸುತ್ತಿರುವ ಸ್ಥಿತಿಯ ಕಂಡು ವರದಿ ಪ್ರಕಟವಾಗಿತ್ತು
ಕಾರ್ಮಿಕರು ಅನುಭವಿಸುತ್ತಿರುವ ಸ್ಥಿತಿಯ ಬಗ್ಗೆ ನಿರ್ದಾಕ್ಷಣವಾಗಿ ಅಧಿಕಾರಿಗಳ ವಿರುದ್ಧ ವರದಿ ಪ್ರಕಟವಾಗುತ್ತಿದ್ದಂತೆಯೇ ಕೊನೆಗೂ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದು ಬೆಳಗ್ಗೆಯಿಂದಲೇ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಬ್ಲಾಕ್ ಆದ ಚೇಮರ್ ದುರಸ್ತಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮತ್ತು ನಮ್ಮವರಿದಿಗಾರ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಮಿಕ ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ಹೇಳಿದಾಗ ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ಹಟ್ಟಿ ಚಿನ್ನದ ಗಣಿ ಕಂಪನಿ ಕ್ಯಾಂಟೀನಲ್ಲಿ ಟಮೋಟ ರೈಸ್ ಮತ್ತು ಶಿರಾ,ತಯಾರ ಮಾಡುವ ಮೂಲಕ ಕಾರ್ಮಿಕರ ಮನೆ ಮನೆಗೆ ತೆರಳಿ ಟಮೋಟ ರೈಸ್, ಸೀರಾ, ವಿತರಣೆ ಮಾಡುವ ದೃಶ್ಯ ಕಂಡು ಬಂತು, ವಿತರಣೆ ಮಾಡುತ್ತಿರುವ ಸಿಬ್ಬಂದಿಯವರನ್ನು ಮಾತನಾಡಿಸಿದಾಗ ತಮ್ಮ ಭಾರತ ವೈಭವ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆ ವರದಿಗೆ ಸ್ಪಂದಿಸಿದ ನಮ್ಮ ಅಧಿಕಾರಿಗಳು ಕಾರ್ಮಿಕ ಕುಟುಂಬಸ್ಥರ, ನೀರು ನುಗ್ಗಿದ ಮನೆಗಳನ್ನು ಪರಿಶೀಲಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ನಮಗೆ ಆದೇಶ ನೀಡಿದ್ದರು ಅದರಂತೆಯೇ ಮನೆ ಮನೆಗೆ ತೆರಳಿ ಉಪಹಾರ ನೀಡುತ್ತಿದ್ದೇವೆ ಎಂದು ಹೇಳಿದರು.
ಸದಾ ನಿಮಗೋಸ್ಕರ ಸಮಾಜದ ಒಳಿತಿಗಾಗಿ ಗ್ರಾಮದ ಮತ್ತು ಊರಿನ ಅಭಿವೃದ್ಧಿಗಾಗಿ
ಸದಾ ನಾವು ನಿಮ್ಮ ಜೊತೆಗಿದ್ದೇವೆ ನಿರ್ಭೀತಿಯಿಂದ,ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟ ಮಾಡುತ್ತೇವೆ ಎಂದು ಕಾರ್ಮಿಕ ಕುಟುಂಬಸ್ಥರಿಗೆ ನಮ್ಮ ವರದಿಗಾರರಾದ ಶ್ರೀನಿವಾಸ್ ಮಧುಶ್ರೀ ತಿಳಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಇಂದು ಮನೆ ಮನೆಗೆ ತೆರಳಿ ಆಹಾರ ವಿತರಣೆ ಮಾಡುತ್ತಿರುವುದರಿಂದ ಹಸಿದ ಹೊಟ್ಟೆಗೆ ಊಟ ಹಾಕಿಸಿದ ಕೆಲಸ ನೀವು ಮಾಡಿದ್ದೀರಿ ಎಂದು ಕಾರ್ಮಿಕ ಕುಟುಂಬಸ್ಥರು ಭಾರತ ವೈಭವ ಪತ್ರಿಕೆ ಗೆ ಕೃತಜ್ಞತೆಗಳನ್ನು ತಿಳಿಸಿದರು.
ವರದಿ : ಶ್ರೀನಿವಾಸ್ ಮಧುಶ್ರೀ




