ಚನ್ನಮ್ಮನ ಕಿತ್ತೂರು :ಕಿತ್ತೂರಿನ ಆಡಳಿತ ಸೌಧದ ಪಕ್ಕದಲ್ಲಿ ಇರುವ ಟಿಸಿಯಲ್ಲಿ ಇರುವ ಕೇಬಲ್ ಹೊರಗಿದೆ ಇದರಿಂದಾಗಿ ಮೂರು ದಿನದಿಂದ ವಿದ್ಯುತ್ ಇಲ್ಲದೆ ಕಚೇರಿಯ ಎಲ್ಲಾ ಕೆಲಸ ಬಂದ್ ಸಾರ್ವಜನಿಕರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಿತ್ತೂರಿನ ತಾಲೂಕಿನ ಆಡಳಿತ ಸೌಧದಲ್ಲಿ ವಿದ್ಯುತ್ ಹೊದರೆ ಜನರೇಟರ್ ಕೊಡ ಇಲ್ಲ ವಿದ್ಯುತ್ ಹೊದರೆ ಸಾರ್ವಜನಿಕರ ಎಲ್ಲಾ ಕೆಲಸ ಬಂದ ಆಗಿ ಇದರಿಂದ ಬಹಳಷ್ಟು ತೊಂದರೆ ಆಗುತ್ತಿದ್ದು ಬೇರೆ ಬೇರೆ ಗ್ರಾಮದಿಂದ ಜನ ಜಾತಿ ಆದಾಯ ಪ್ರಮಾಣ ಅರ್ಜಿ, ರವಾಸಿ ಅರ್ಜಿ, ಪಿಂಚಣಿ ಅರ್ಜಿ ಇನ್ನೂ ಹಲವು ಅರ್ಜಿಗಳನ್ನು ಹಾಕುವುದ್ದಕ್ಕ ಆಡಳಿತ ಸೌಧಕ್ಕೆ ಸಾರ್ವಜನಿಕರು ಬರುತ್ತಾರೆ ಆದರೆ ಈ ಆಡಳಿತ ಸೌಧಕ್ಕೆ ಬಂದರೆ ವಿದ್ಯುತ್ ಇಲ್ಲದೆ ಪರಡಾರುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಹೊದಾಗ ಕೆಲಸಕ್ಕೆ ಸಮಸ್ಯೆ ಆಗಬಾರದು ಅಂದರೆ ಆದಷ್ಟು ಬೇಗ ಒಂದು ಜನರೇಟರ್ ವ್ಯವಸ್ಥೆ ಆಗಬೇಕು. ಇದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಜನರೇಟರ್ ವ್ಯವಸ್ಥೆ ಮಾಡತ್ತಾರ ಅಂತ ಕಾದು ನೋಡಬೇಕು.
ವರದಿ: ಬಸವರಾಜ ಭಿಮರಾಣಿ




