Ad imageAd image

ಕಾಂಗ್ರೆಸ್‌ನಲ್ಲಿ ಈಗರಿರುವವರೆಲ್ಲರೂ ನಕಲಿ ಗಾಂಧಿಗಳು. ಅದು ಕಳ್ಳಕಾಕರ ಗುಂಪು : ಕೇಂದ್ರ ಸಚಿವ ಜೋಶಿ

Bharath Vaibhav
ಕಾಂಗ್ರೆಸ್‌ನಲ್ಲಿ ಈಗರಿರುವವರೆಲ್ಲರೂ ನಕಲಿ ಗಾಂಧಿಗಳು. ಅದು ಕಳ್ಳಕಾಕರ ಗುಂಪು : ಕೇಂದ್ರ ಸಚಿವ ಜೋಶಿ
WhatsApp Group Join Now
Telegram Group Join Now

ಹುಬ್ಬಳ್ಳಿ : ಕಾಂಗ್ರೆಸ್‌ನಲ್ಲಿ ಈಗರಿರುವವರೆಲ್ಲರೂ ನಕಲಿ ಗಾಂಧಿಗಳು. ಅದು ಕಳ್ಳಕಾಕರ ಗುಂಪು. ಇವರ್ಯಾರೂ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್‌ನ ವಾರಸುದಾರರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಶತಮಾನೋತ್ಸವದ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಿರುವ ಕಾಂಗ್ರೆಸ್‌ಗೂ, ಮಹಾತ್ಮ ಗಾಂಧೀಜಿ ಗೂ ಏನು ಈಗಿನದು ನಕಲಿ ಕಾಂಗ್ರೆಸ್.‌ ಹಳೇ ಕಾಂಗ್ರೆಸ್‌ ತುಂಡು ತುಂಡಾಗಿ ಹೋಗಿದೆ. ನಕಲಿ ಕಾಂಗ್ರೆಸ್‌ಗೆ ಸರ್ಕಾರಿ ದುಡ್ಡು ಯಾಕೆ ಹಾಕುತ್ತೀರಾ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರನ್ನು ಕಾರಿನಲ್ಲಿಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿಕೆ ನೀಡಿದ್ದಾರೆ. ಹಾಗಾರೆ ಗೃಹ ಸಚಿವರನ್ನೇ ಕತ್ತಲಿನಲ್ಲಿ ಇಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರದಾರ ಯಾರು ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!