Ad imageAd image

ತಿಂಗಳ ಕೊನೆಯಲ್ಲಿ ಎಲ್ಲಾ ಅನುದಾನವು ಬಳಕೆ, ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಬೇಕು.

Bharath Vaibhav
ತಿಂಗಳ ಕೊನೆಯಲ್ಲಿ ಎಲ್ಲಾ ಅನುದಾನವು ಬಳಕೆ, ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಬೇಕು.
WhatsApp Group Join Now
Telegram Group Join Now

ಮೊಳಕಾಲ್ಮೂರು:-ಮಾರ್ಚ್ ಮೂವತ್ತರ ಒಳಗೆ ಅನುದಾನ ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು,

ಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿ ಹಾಗೂ ಶೌಚಾಲಯಗಳ ಕಟ್ಟಡಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಲ್ಲಾ ಅನುದಾನವನ್ನು ಬಳಿಕೆ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಿಆರ್‌ಡಿ ಇಂಜಿನಿಯರ್ ಗೆ ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು.

ಈ ಬಾರಿ ಬೇಸಿಗೆ ಕಾಲ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಗಳಿದ್ದು ಎಲ್ಲಾ ಪೀಡಿಗಳು ನೀರಿನ ಸಮಸ್ಯೆ ಉಲ್ಬಣ ಆಗದಂತೆ ನೋಡಿಕೊಳ್ಳಬೇಕು ಅಡ್ವಾನ್ಸ್ ಆಗಿ ಪೈಪ್ ಲೈನು ಬೋರ್ವೆಲ್ಗಳು ಎಲ್ಲಾ ನೀರಿನ ವ್ಯವಸ್ಥೆಯನ್ನು ಚೆಕ್ ಮಾಡಿಕೊಳ್ಳಬೇಕು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮುಂದಿನ ಬಾರಿ ಹೆಚ್ಚು ಅನುದಾನಕ್ಕೆ ಪ್ರೊಪೋಸಲ್ ಮಾಡಿ ರೆಡಿಯಾಗಿರಬೇಕು ಎಂದು ಇ ಓ ಹೆಚ್ ಹನುಮಂತಪ್ಪ ಅಧಿಕಾರಿಗಳಿಗೆ ತಿಳಿಸಿದರು.

ಅದೇ ರೀತಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಕೋಳಿಗಳಿಗೆ ಅಕ್ಕಿ ಜ್ವರ ಕಾಣಿಸಿಕೊಂಡಿದ್ದು ವರದಿಯಾಗಿದೆ, ಇದರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಪಶು ಸಂಗೋಪನ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು,

ಪಟ್ಟಣದಲ್ಲಿ ಯಾವುದೇ ಒಂದು ಪೌಲ್ಟ್ರಿ ಫಾರಂನಲ್ಲಿ ಸಾವಿರಾರು ಕೋಳಿಗಳು ಸತ್ತು ಹೋಗಿವೆ ಮಾಲೀಕರು ಅವುಗಳನ್ನು ಮಣ್ಣಿನಲ್ಲಿ ಮುಚ್ಚಿ ಹಾಕಿದ್ದಾರೆ ಎಂದು ತಿಳಿದುಬಂದಿದೆ, ಇದಕ್ಕೆ ಇನ್ಶೂರೆನ್ಸ್ ಮಾಡಿ ಹಣ ಪಡೆಯಲು ಮಾಲೀಕರು ಈ ತರ ನಡೆದುಕೊಳ್ಳುತ್ತಾರೆ ಎಂದು ತಿಳಿದುಬಂದಿದೆ,

ಅದೇ ರೀತಿ ನಕಲಿ ವೈದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಆರೋಗ್ಯ ಇಲಾಖೆ ಅಧಿಕಾರಿಗೆ ನಿರ್ಧ ಕ್ಷಣವಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಫ್ಐಆರ್ ಹಾಕಿ ಅವರನ್ನು ಜೈಲಿಗೆ ಕಳಿಸಬೇಕು ಎಂದು ಕಾರವಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಟೀ ಜಗದೀಶ್ ನಾಮ ನಿರ್ದೇಶನ ಸದಸ್ಯರು ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ಪಿಡಿಒಗಳು ಪೊಲೀಸ್ ಸಿಬ್ಬಂದಿ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ:- ಪಿಎಂ ಗಂಗಾಧರ

 

WhatsApp Group Join Now
Telegram Group Join Now
Share This Article
error: Content is protected !!