ಚಿಕ್ಕೋಡಿ: ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮ ಪ್ರಭು ಮಹಾ ಸ್ವಾಮಿಗಳವರಿಗೆ ಮರಣೋತ್ತರ ೨೦೨೫ನೇ ಸಾಲಿನ ಕರ್ನಾಟಕ ರಾಜೋತ್ಸವ ಪ್ರಶಸ್ತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮತ್ತು ಈ ಭಾಗದ ಜನ ಪ್ರತಿನಿದಿಗಳಿಗೆ ಹಾಗೂ ಬೆಳಗಾವಿ ಜಿಲ್ಲಾ ಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ ಮಾಡಿದೆ.
ಚಿಕ್ಕೋಡಿ ತಾಲ್ಲೂಕಿನ ಗಡಿ ಭಾಗದ ಚಿಂಚಣಿ ಗ್ರಾಮದ ಕನ್ನಡ ಮಠ ಎಂದು ಪ್ರಖ್ಯಾತಿ ಪಡೆದಿರುವ ಕರ್ನಾಟಕದ ಎಕೈಕ ಕನ್ನಡ ಮಠ ಎಂದು ಪರಿಚಯಿಸಿದ್ದು ಅದಲ್ಲದೆ ಗಡಿ ಭಾಗದಲ್ಲಿ ಸುಮಾರು ೩ ದಶಕಗಳಿಂದ ಕನ್ನಡ ನಾಡು ನುಡಿ ಜಲ ಸೇರಿದಂತೆ ಅನೇಕ ಕನ್ನಡ ಕಾರ್ಯಕ್ರಮಗಳು ಮಾಡುತ್ತಾ ಇದ್ದರು.
ಶ್ರೀಮಠದಿಂದ ನಾಡು ನುಡಿ ಹೋರಾಟ ಜೊತೆಗೆ ೫೧ ಕನ್ನಡ ಗ್ರಂಥಗಳು ಲೋಕಾರ್ಪಣೆ ಮಾಡಿದ ಕನ್ನಡ ಮಠ ಎಂದು ಪ್ರಖ್ಯಾತವಾಗಿದ್ದು ಶ್ರೀಗಳು ಜೀವಿತ ಅವಧಿಯಲ್ಲಿ ಯಾವತ್ತು ಕೂಡಾ ಕರ್ನಾಟಕ ಸರ್ಕಾರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಎಂದಿಗೂ ಕೇಳಲಿಲ್ಲ ಆದರಿಂದ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ ಏನೆಂದರೆ ಕರ್ನಾಟಕ ಸರ್ಕಾರಕ್ಕೆ ಶ್ರೀ ಅಲ್ಲಮ ಪ್ರಭು ಮಹಾ ಸ್ವಾಮಿಜಿ ಅವರ ಕನ್ನಡ ಸೇವೆಗಳು ಪರಿಗಣಿಸಿ ಅವರ ಮರಣೋತ್ತರ ಕರ್ನಾಟಕ ರಾಜೋತ್ಸವ ಪ್ರಶಸ್ತಿ ನೀಡಬೇಕೆಂದು ಕರ್ನಾಟಕ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಶ್ರೀಗಳಿಗೆ ೨೦೨೫ನೇ ಸಾಲಿನ ಕರ್ನಾಟಕ ರಾಜೋತ್ಸವ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದೆ.
ಸಂಜು ಎಸ್. ಬಡಿಗೇರ ಕ.ರ.ವೇ. ತಾಲೂಕಾ ಅಧ್ಯಕ್ಷರು ಚಿಕ್ಕೋಡಿ, ಚಂದ್ರಕಾAತ ಹುಕ್ಕೇರಿ ಸಮಾಜ ಸೇವಕರು ಚಿಕ್ಕೋಡಿ ರುದ್ರಯ್ಯಾ ಅಪ್ಪಯ್ಯಾ ಹೀರೆಮಠ, ಅಮುಲ ನಾವಿ ಇದ್ದರು.
ವರದಿ: ರಾಜು ಮುಂಡೆ




