ಹುಮನಾಬಾದ: ತಾಲ್ಲೂಕು ಸಿಂಧನಕೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಹಣಕುಣಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೋಂಡಾ ನಕಲಿ ಬಿಲ್ ತೈಯಾರಿಸಿ ಹಣ ಪಡೆದುಕೊಂಡಿದ್ದಾರೆ ಎಂದು ಗ್ರಾಮದ ನಿವಾಸಿ ಪ್ರಭು ನಾಗನಾಯಕ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಗ್ರಾಮ ಪಂಚಾಯತ ಸಿಂಧನಕೇರಾ ಕಛೇರಿಯಲ್ಲಿ ಮಾತನಾಡಿದರು.ಹೊಲದಲ್ಲಿ ಕೃಷಿ ಹೋಂಡಾ ಹೆಸರಲ್ಲಿ ಭೋಗಸ್ ಬಿಲ್ ಪಡೆದುಕೊಂಡವರು ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜನರಿಗೆ ಕೆಲಸ ನೀಡದೆ ಮಶೀನ್ ಬಳಸಿ ಮುಗ್ದ ಜನರ ಬ್ಯಾಂಕಿಗೆ ಹಣ ಜಮಾ ಮಾಡಿಸಿ ಅವರಿಗೆ 200 ಕೊಟ್ಟು ಉಳಿದ ಹಣವನ್ನು ಸದಸ್ಯರು ತಂಬ್ ಹಚ್ಚಿಕೊಂಡು ಹಣ ವಸೂಲಿ ಮಾಡಿಕೊಳ್ಳುತ್ತಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಕ್ರಮ ಆಗುತ್ತಿಲ್ಲ.ಸಂಭಂದಪಟ್ಟ ಅಧಿಕಾರಿಗಳು ಇದನ್ನು ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದು ಯೋಹಾನ ಆಗ್ರಹಿಸಿದರು.
ಕಾಮಗಾರಿಗಾಗಿ ಅರ್ಜಿ ನೀಡಿದರೆ ಕಾಮಗಾರಿ ಹೆಸರು ಕಟ್ ಮಾಡುತ್ತಾರೆ.ಸದಸ್ಯರು ಕೊಟ್ಟಿರುವ ಹೆಸರು ಮಾತ್ರ ಎಕ್ಸನ್ ಪ್ಲಾನ್ ನಲ್ಲಿ ಇಡುತ್ತಾರೆ. ಬೇಕಾದವರ ಹೆಸರು ಇಟ್ಟು ಕಾಮಗಾರಿ ಮಾಡದೆ ಬಿಲ್ ತೆಗೆದುಕೊಳ್ಳುತ್ತಾರೆ ಎಂದು ಅಮರ ನಾಗನಾಯಕ ಕೂಡ ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರದೀಪ ನಾಗನಾಯಕ,ಪ್ರಶಾಂತ ನಾಗನಾಯಕ,ಸಾಗರ ನಾಗನಾಯಕ, ಪ್ರಜ್ವಲ್ ನಾಗನಾಯಕ,ಅರುಣ ನಾಗನಾಯಕ,ನಿಖಿಲ್ ಇದ್ದರು.
ಗ್ರಾಪಂ ಕಛೇರಿಯಲ್ಲಿ ಹಣ ದುರುಪಯೋಗ ಆರೋಪ ಕೇಳಿ ಬಂದಿದೆ. ಗ್ರಾಪಂಯ ಪ್ರಭಾರ ಪಿಡಿಓ ಆಗಿರುವ ನಾಗೇಂದ್ರ ಅವರು 2018 ರಿಂದ 2021ನೇ ಸಾಲಿನವರೆಗೆ ನಡೆದಿರುವ ಕಾಮಗಾರಿಗಳಿಗೆ ಸರಿಯಾದ ಕ್ರಿಯಾ ಯೋಜನೆ ಮಾಡದೇ ಹಣ ದುರುಪಯೋಗ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಯಂತ್ರ ಬಳಸಿ ಕಾಮಗಾರಿ :
ಗ್ರಾಪಂ ನಿಧಿ-1, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 14 ಹಾಗೂ 15ನೇ ಹಣಕಾಸು ಯೋಜನೆ, ಇ-ಸ್ವತ್ತು, ಎಸ್‍ಸಿ-ಎಸ್‍ಟಿ ಕಲ್ಯಾಣನಿಧಿ ಯೋಜನೆಗೆ ಸಂಬಂಧಿಸಿದಂತೆ ಬಾರಿ ಅವ್ಯವಹಾರ ನಡೆದಿರುವುದಾಗಿ ಪಿಡಿಒ ವಿರುದ್ಧ ದೂರಿರುವ ಗ್ರಾಮಸ್ಥರು, ವಿವಿಧ ಯೋಜನೆಗಳಾದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿ ಹೊಂಡ, ಕೆರೆ ಹೂಳು ತೆಗೆಯುವುದು, ಸಿಸಿ ರಸ್ತೆ, ಜಲ್ಲಿ ರಸ್ತೆ, ಹಾಗೂ ಕಲ್ಯಾಣಿ ಅಭಿವೃದ್ಧಿಗಳಂತಹ ಕಾಮಗಾರಿಗಳನ್ನು ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಬೇಕು. ಆದರೆ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಟೆಂಡರ್ ಕರೆದು ದರ ನಿರ್ಧರಿಸಿರುವವರೆ ಸಾಮಗ್ರಿ ಸರಬರಾಜು ಮಾಡಬೇಕು ಆದರೆ ಮನಸ್ಸೊಯಿಚ್ಛೆ ಗುತ್ತಿಗೆದಾರರ ಹೆಸರಿಗೆ ಸಾಮಗ್ರಿಗಳ ಬಿಲ್ಲುಗಳನ್ನು ಹಾಕಲಾಗಿದೆ.
ಒಂದೇ ಕಾಮಗಾರಿಗೆ 2 ಯೋಜನೆ ಹಣ :
2018 ರಿಂದ ಇಲ್ಲಿನವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಕಟಾಯಿಸಲಾಗಿರುವ ರಾಯಲ್ಟಿ ಹಣವನ್ನು ಸಂಬಂಧಪಟ್ಟ ಲೆಕ್ಕ ಶಿರ್ಷೀಕೆಗೆ ಜಮೆ ಮಾಡಬೇಕು. ಇಲ್ಲಿಯವರೆಗೂ ಯಾವುದೇ ಹಣವನ್ನು ಸಂಬಂಧಿಸಿದ ಲೆಕ್ಕ ಶಿರ್ಷೀಕೆಗೆ ಜಮೆ ಮಾಡಿರುವುದಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡಿದ್ದು ಮತ್ತೆ ನಿಧಿ-1 ರಲ್ಲಿಯೂ ಸಹ ಖರ್ಚು ಮಾಡಿದ್ದಾರೆ. ಕುಡಿಯುವ ನೀರು ನಿರ್ವಹಣೆ, ಬೀದಿ ದೀಪ ಖರೀದಿ ಮಾಡಿರುವ ಬಗ್ಗೆ ಹಾಗೂ ಇತರೇ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದರೂ ಬಿಲ್ ಪಾಸ್ ಮಾಡಿದ್ದು, ಕಮಿಷನ್ ಲೆಕ್ಕದಲ್ಲಿ ಅಂಗಡಿಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಆದ್ದರಿಂದ ಮರು ಲೆಕ್ಕ ತಪಾಸಣೆ ನಡೆಸಿ ಸದರಿ ಪಿಡಿಓ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಲಂಚವಿಲ್ಲದೆ ಕೆಲಸ ಆಗಲ್ಲ :
ಗ್ರಾಪಂನಲ್ಲಿ ಇ-ಸ್ವತ್ತು ಅಕ್ರಮಗಳನ್ನು ತಡೆಯಬೇಕು. ಲಂಚ ಕೊಟ್ಟರೆ ಮಾತ್ರ ಜನರಿಗೆ ಕೆಲಸ ಎಂಬಂತಾಗಿದ್ದು, ದುಡ್ಡು ಕೊಡದಿದ್ದರೇ ದಾಖಲೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವು ಪ್ರಭಾವಿಗಳಿಗೆ ದಾಖಲೆಗಳು ಇಲ್ಲದಿದ್ದರೂ ಸಹ ಇ-ಸ್ವತ್ತು ಮಾಡಿಕೊಡಾಗುತ್ತಿದೆ. ಆದರೇ ಜನ ಸಾಮಾನ್ಯರಿಗೆ ದಾಖಲೆ ಸರಿ ಇಲ್ಲ ಎಂದು ಸಬೂಬು ಹೇಳುತ್ತಾರೆ. ಅಲ್ಲದೇ ಸರಿಯಾದ ಸಮಯಕ್ಕೆ ಕಛೇರಿಗೆ ಬಾರದೆ ಜನರನ್ನು ಅಲೆದಾಡಿಸುತ್ತಿದ್ದು, ಜನ ವಿರೋಧಿ ಪಿಡಿಓ ಅವರನ್ನು ಶೀಘ್ರ ಅಮಾನತ್ತು ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಪ್ರಭು ನಾಗನಾಯಕ,ಅಮರ ನಾಗನಾಯಕ,ಯೋಹಾನ ನಾಗನಾಯಕ, ಪ್ರದೀಪ ನಾಗನಾಯಕ,ಪ್ರಶಾಂತ ನಾಗನಾಯಕ,ಸಾಗರ ನಾಗನಾಯಕ, ಪ್ರಜ್ವಲ್ ನಾಗನಾಯಕ,ಅರುಣ ನಾಗನಾಯಕ,ನಿಖಿಲ್ ಇದ್ದರು.