Ad imageAd image

ವಿವಿಧೆಡೆ ಪ್ರಚಾರ ನಡೆಸಿದ ಮೈತ್ರಿ ಅಭ್ಯರ್ಥಿ ಜಗದೀಶ್ ಶೆಟ್ಟರ್

Bharath Vaibhav
ವಿವಿಧೆಡೆ ಪ್ರಚಾರ ನಡೆಸಿದ ಮೈತ್ರಿ ಅಭ್ಯರ್ಥಿ ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ:- ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಬೈಲಹೊಂಗಲ ತಾಲೂಕಿನ ವಿವಿಧ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಸೋಮವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಲಹೊಂಗಲ ವಿಧಾನಕ್ಷೇತ್ರ ವ್ಯಾಪ್ತಿಯ ಪಟ್ಟಿಹಾಳ ಗ್ರಾಮದ ಬಸ್ ನಿಲ್ದಾಣದ ಬಳಿ ಪ್ರಚಾರ ಸಭೆ ನಡೆಸಿ, ಉತ್ತಮ ಆಡಳಿತ ಹಾಗೂ ದೇಶದ ಉತ್ತಮ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು. ಅವರನ್ನು ಮೂರನೆ ಸಲ ಪ್ರಧಾನಿಯನ್ನಾಗಿ ಮಾಡಬೇಕು.‌ ಪ್ರಧಾನಿ ಮೋದಿಯವರ ಅಡಳಿತದಲ್ಲಿ ದೇಶ ಎಲ್ಲಾ ಕ್ಷೇತ್ರದಲ್ಲಿ ಅಭೀವೃದ್ದಿ ಸಾಧಿಸಿದೆ.‌ ಹಾಗಾಗಿ ನನಗೆ ಮತ ನೀಡುವ ಮೂಲಕ ಮೋದಿಯವರ ಕೈ ಬಲಪಡಿಸುವಂತೆ ಕರೆ ನೀಡಿದರು

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಶಿವಾಜಿ ಗಡದವರ, ಎ.ಸಿ.‌ಕತ್ತಿ, ಮಂಜುನಾಥ ಬಸರಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಕೆಂಗಾನೂರ ಪೇಟೆಯಲ್ಲಿ ಸಭೆ ನಡೆಸಿದ ಜಗದೀಶ್ ಶೆಟ್ಟರ್

ಬೈಲಹೊಂಗಲ ಮತಕ್ಷೇತ್ರದ ಕೆಂಗಾನೂರ ಪೇಟೆ ಓಣಿಯ ಗ್ರಾಮದೇವಿ ದೇವಸ್ಥಾನದ ಬಳಿ ಕೆಂಗಾನೂರ , ಅರವಳ್ಳಿ, ಜಾಲಿಕೊಪ್ಪ ಹಾಗೂ ಲಿಂಗದಳ್ಳಿ ಬಿಜೆಪಿ-ಜೆಡಿಸ್ ಪಕ್ಷದ ಪ್ರಮುಖರೊಂದಿಗೆ ಸಭೆ ಮಾಡಿ, ಜಗದೀಶ್ ಶೆಟ್ಟರ ಅವರು ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ನರೇಂದ್ರ ಮೋದಿಯವರು 2014 ರಲ್ಲಿ ಪ್ರಧಾನಿಯಾದಾಗ ಗಳಿಸಿದ ಜನಪ್ರಿಯತೆಗಿಂತ ಎರಡು ಪಟ್ಟು ಜನರ ವಿಶ್ವಾಸವನ್ನು ಅವರು ಈಗ ಗಳಿಸಿದ್ದಾರೆ. ಒಂದು ಕಪ್ಪು ಚುಕ್ಕೆ ಇಲ್ಲದಂತೆ ಅವರು ಆಡಳಿತ ಮಾಡಿದ್ದಾರೆ. ಯುಪಿಯ ಕಾಂಗ್ರೆಸ್ ಸರ್ಕಾರ ಇದ್ದಾಗ ಲಕ್ಷಾಂತರ ಹಗರಣ ಮಾಡಿದೆ. ಆದರೆ ಮೋದಿಯವರು 10 ವರ್ಷದಲ್ಲಿ ಒಂದೇ ಒಂದು ಹಗರಣ ಮಾಡಿಲ್ಲ, ಈ ಕುರಿತು ವಿರೋಧ ಪಕ್ಷಗಳು ಕೂಡಾ ಎಂದು ಧ್ವನಿ ಎಲ್ಲತ್ತಿಲ್ಲ ಎಂದು ತಿಳಿಸಿದರು.‌

ಬಳಿಕ ಮತನಾಡಿದ ಬಿಜೆಪಿ ಮುಖಂಡ ಡಾ.ವಿಐ ಪಾಟೀಲ್ ಅವರು, ಬೆಳಗಾವಿ ಜಿಲ್ಲೆಯಲ್ಲೇ ಬೈಲಹೊಂಗಲ ತಾಲುಕಿನಲ್ಲಿ ಹೆಚ್ಚು ಲೀಡ್ ನೀಡಬೇಕು. ಹಾಗಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಕ್ಕಟ್ಟಿನಿಂದ ಕೆಲಸ ಮಾಡಬೇಕು. ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಬೇಕು ಎಂದು ಕರೆ ನೀಡಿದರು.‌

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಜಗದೀಶ ಮೆಟಗುಡ್, ಡಾ. ವಿ.ಐ. ಪಾಟೀಲ, ಮಂಡಲ ಅಧ್ಯಕ್ಷರಾದ ಗುರುಪಾದ ಕಳ್ಳಿ, ಪ್ರಮುಖರಾದ ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ, ಯಲ್ಲಪ್ಪ ಹೂಲನಗನವರ, ಚಂದ್ರಗೌಡ ಪಾಟೀಲ, ಮಲ್ಲಪ್ಪ ನಂದ್ಯಪ್ಪನವರ, ಪುಂಡಲೀಕ ಗಾಣಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!