Ad imageAd image

ಸಿಂಧನೂರು ಸುದ್ದಿ-ಕ್ಷೌರಿಕ ಮುದುಕಪ್ಪನನ್ನು ಗಲ್ಲಿಗೇರಿಸಲು. ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ.

Bharath Vaibhav
ಸಿಂಧನೂರು ಸುದ್ದಿ-ಕ್ಷೌರಿಕ ಮುದುಕಪ್ಪನನ್ನು ಗಲ್ಲಿಗೇರಿಸಲು. ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ.
WhatsApp Group Join Now
Telegram Group Join Now

ಸಿಂಧನೂರು:- ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ನನ್ನು ಕೊಲೆ ಮಾಡಿದ ಕ್ಷೌರಿಕ ಮುದುಕಪ್ಪ ತಂದೆ ಆದಪ್ಪ ಹಡಪದ್ ನನ್ನು ಗಲ್ಲಿಗೇರಿಸಲು ಆಗ್ರಹಿಸಿ ತಸಿಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ.

ಹಿರಿಯ ಹೋರಾಟಗಾರ ಮೌನೇಶ್ ಜಾಲವಡಿಗಿ ಮಾತನಾಡಿ ಈ ದೇಶದಲ್ಲಿ ನಿತ್ಯ ನಿರಂತರವಾಗಿ ಜಾತಿಯತೆ ಅಸ್ಪೃಶ್ಯತೆ ಅಸಮಾನತೆ ದೌರ್ಜನ್ಯ ದರ್ಪ ದಬ್ಬಾಳಿಕೆ ಅನಾಗರಿಕ ಕ್ರೌರ್ಯ ಗಳು ಶತಶತಮಾನಗಳಿಂದಲೂ ಶೋಷಿತರ ಮೇಲೆ ಏರುತ್ತಾ ಬಂದಿರುವ ಜಾತಿವಾದಿ ಮನಸ್ಥಿತಿಗಳು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ ಅದೇ ಗ್ರಾಮದ ಯಮನೂರಪ್ಪ ಎಂಬ ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ ಜಾತಿವಾದಿ ಹೀನ ಮನಸ್ಥಿತಿ ಕ್ಷೌರಿಕ ಆ ಯುವಕನನ್ನು ಕತ್ತರಿಯಿಂದ ಹಿರಿದು ಕೊಲೆ ಮಾಡಿರುವ ಹೇಯ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆತಿಗಿಸುವಂತ ದುಷ್ಕೃತ್ಯವಾಗಿದೆ

ಇಂದು 21ನೇ ಶತಮಾನದ ಭಾರತದಲ್ಲಿ ಇಂತಹ ಅಸ್ಪೃಶ್ಯತೆ ಆಚರಣೆ ಅವಮಾನ ಕೊಲೆಗಳು ಇಡೀ ದೇಶಕ್ಕೆ ಮಾಡುವಂತ ಘೋರ ಅಪಮಾನ ಜಾತಿವಾದಿ ಕ್ಷೌರಿಕನನ್ನು ಕೂಡಲೆ ಗಲ್ಲಿಗೇರಿಸಿ. ಕೊಲೆಯಾದ ಯುವಕನ ಕುಟುಂಬಕ್ಕೆ 50, ಲಕ್ಷ ರೂಪಾಯಿ ಪರಿಹಾರ ಒದಗಿಸಿ ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿ ಒದಗಿಸಿ ರಾಜ್ಯದ್ಯಂತ ಅಸ್ಪೃಶ್ಯತೆ ಕೊನೆಗಾಣಿಸಲು ಕಠಿಣಕಾನುಕ್ರಮ ಜರುಗಿಸಬೇಕೆಂದು ಆರ್. ಬೋನ್ ವಂಚರ್. ಮೌನೇಶ್ ಜಾಲವಾಡಿಗೆ. ಪಂಪಾಪತಿ ಹಂಚಿನಾಳ. ಆಲಂಬಾಶ ಬೂದಿವಾಳ. ಯಮನೂರು ಬಸಾಪುರ. ಮಹೇಶ್ ಸಿಂಧನೂರ ಹನುಮೇಶ್ ಮೈತ್ರಿ. ಸರ್ಕಾರಕ್ಕೆ ಒತ್ತಾಯಿಸಿದರು

ವರದಿ:-ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!