Ad imageAd image

ಜಗತ್ತಿನಲ್ಲಿ ಗೌರವಯುತವಾಗಿ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕಾರ ಅವಶ್ಯ : ಅಮರೇಶ್

Bharath Vaibhav
ಜಗತ್ತಿನಲ್ಲಿ ಗೌರವಯುತವಾಗಿ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕಾರ ಅವಶ್ಯ : ಅಮರೇಶ್
WhatsApp Group Join Now
Telegram Group Join Now

ತುರುವೇಕೆರೆ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಗೌರವಯುತವಾಗಿ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕಾರ ಅವಶ್ಯ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಎನ್.ಅಮರೇಶ್ ತಿಳಿಸಿದರು.

ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕೃಷ್ಣಾಸ್ ಪ್ರೀಸ್ಕೂಲ್ ಆಯೋಜಿಸಿದ್ದ ಕಿನ್ನರ ಉತ್ಸವ ಮತ್ತು ಕಿರಿಯರ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ, ಮೌಲ್ಯಗಳು, ಪಾರಂಪರಿಕ ಸಂಸ್ಕೃತಿ, ಆಚಾರ ವಿಚಾರಗಳು ಪಾಶ್ಚಾತ್ಯ ಅಂಧಾನುಕರಣೆಯಲ್ಲಿ ಕಣ್ಮರೆಯಾಗಿದೆ. ಈ ಸಂದರ್ಭದಲ್ಲಿ ಕೃಷ್ಣಾಸ್ ಪ್ರೀಸ್ಕೂಲ್ ಮಗುವಿನ ಬೆಳವಣಿಗೆಗೆ ಪ್ರಾಥಮಿಕ ಹಂತದಲ್ಲಿ ಬೇಕಾದಂತಹ ಅಗತ್ಯ, ಅತ್ಯಮೂಲ್ಯ ತಳಪಾಯವನ್ನು ಕಟ್ಟಿಕೊಡುವಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಗವದ್ಗೀತೆ, ಶ್ಲೋಕ, ಮಕ್ಕಳ ಹಾಡುಗಳನ್ನು ಹೇಳಿಕೊಟ್ಟು, ನಮ್ಮ ಪಾರಂಪರಿಕ ಹಬ್ಬಗಳು, ರಾಷ್ಟ್ರೀಯ ಹಬ್ಬಗಳ ಬಗ್ಗೆ ಅರಿವನ್ನು ಮೂಡಿಸಿ ಮಕ್ಕಳಲ್ಲಿ ಸಂಸ್ಕಾರ, ಸಂಪ್ರದಾಯವನ್ನೂ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಘಟಿಕೋತ್ಸವ ಉದ್ಘಾಟಿಸಿದ ಪಟ್ಟಣ ಪಂಚಾಯ್ತಿ ಸದಸ್ಯ ಯಜಮಾನ್ ಮಹೇಶ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮನೆಯಲ್ಲಿ ಪೋಷಕರು ಸಾಧ್ಯವಾದಷ್ಟು ಮಕ್ಕಳಿಂದ ಮೊಬೈಲ್ ದೂರವಿಡಬೇಕು, ಎಳೆಯ ಮಕ್ಕಳು ಹಠ ಮಾಡುತ್ತಾರೆ, ಅಳುತ್ತಾರೆ, ಊಟ ಮಾಡುವುದಿಲ್ಲ ಎಂದು ಮೊಬೈಲ್ ನೀಡಿದರೆ ಅವರ ಕಣ್ಣಿನ ಜೊತೆ ಮುಂದಿನ ಸುಂದರ ಬದುಕನ್ನು ನಾಶ ಮಾಡಿದಂತಾಗುತ್ತದೆ. ಮೊಬೈಲ್ ನ ಸಾಧಕ, ಭಾದಕಗಳ ಅರಿವಿರುವ ನಾವುಗಳು ಸಾಧ್ಯವಾದಷ್ಟು ಚಿಕ್ಕಮಕ್ಕಳ ಕೈಗೆ ಮೊಬೈಲ್ ನೀಡುವುದನ್ನು ನಿಲ್ಲಿಸಬೇಕು. ಅದರ ಬದಲು ಮಕ್ಕಳಿಗೆ ಭಕ್ತಿಗೀತೆ, ಭಾವಗೀತೆ, ಚಿತ್ರಕಲೆ, ಸಂಗೀತ ಸೇರಿದಂತೆ ಇನ್ನಿತರ ಉತ್ತಮ ವಿಚಾರಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಬೇಕು. ಮಕ್ಕಳ ಬೌದ್ದಿಕ ಮಟ್ಟ ಸುಧಾರಿಸುವಂತಹ ಆಟೋಟಗಳನ್ನು ಸಹ ಕಲಿಸಬೇಕು ಎಂದರು.

ಕೃಷ್ಣಾಸ್ ಪ್ರೀಸ್ಕೂಲ್ ಶಾಲೆಯು ಯು.ಕೆ.ಜಿ. ಮುಗಿಸಿದ 10 ಮಂದಿ ಪುಟಾಣಿ ಮಕ್ಕಳಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ವಿಶೇಷವಾಗಿ ಸಿಂಗರಿಸಿದ್ದ ಪ್ರಮಾಣ ಪತ್ರ, ವಿಶೇಷ ಭಾವಚಿತ್ರ ಫಲಕ ನೀಡಿ ಗೌರವಪೂರ್ವಕ ಬೀಳ್ಕೊಡುಗೆ ನೀಡಿತು. ಶೈಕ್ಷಣಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುಟಾಣಿ ಮಕ್ಕಳು ಯಕ್ಷಗಾನ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಹಾಗೂ ಪೋಷಕರು ರಾಜ್ಯದ ವಿವಿಧ ಜಿಲ್ಲೆಯ ಸಂಸ್ಕೃತಿಯನ್ನು ಸಾರುವಂತಹ ವೇಷಭೂಷಣದಲ್ಲಿ ನೃತ್ಯ ನಡೆಸಿಕೊಟ್ಟದ್ದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

ಚೈತನ್ಯ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಅಮರೇಶ್ ಎನ್., ಪಪಂ ಸದಸ್ಯರಾದ ಯಜಮಾನ್ ಮಹೇಶ್, ಟಿ.ಕೆ.ಪ್ರಭಾಕರ್, ಮಹಿಳಾ ಸಮಾಜದ ತ್ರಿವೇಣಿಮಲ್ಲಿಕಾರ್ಜುನ್, ಶಾಲೆಯ ಮುಖ್ಯಶಿಕ್ಷಕಿ ಸುಷ್ಮಾ ಚೈತನ್ಯ, ಕೃಷ್ಣ ಚೈತನ್ಯ, ಲಲಿತಾರಾಮಚಂದ್ರ, ಉಷಾ ಶ್ರೀನಿವಾಸ್ ಹಾಗೂ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!