Ad imageAd image

ಅಂಬೇಡ್ಕರ್ ಅವರು ಸಂವಿಧಾನವನ್ನು ಪ್ರತಿಯೊಂದು ಜಾತಿ ಜನಾಂಗಕ್ಕೂ ನೀಡಿದ್ದಾರೆ: ಹಿರಿಯ ಶ್ರೇಣಿ ನ್ಯಾಯಾಧೀಶೆ. ಭಾರತಿ ಎಂ

Bharath Vaibhav
ಅಂಬೇಡ್ಕರ್ ಅವರು ಸಂವಿಧಾನವನ್ನು ಪ್ರತಿಯೊಂದು ಜಾತಿ ಜನಾಂಗಕ್ಕೂ ನೀಡಿದ್ದಾರೆ: ಹಿರಿಯ ಶ್ರೇಣಿ ನ್ಯಾಯಾಧೀಶೆ. ಭಾರತಿ ಎಂ
WhatsApp Group Join Now
Telegram Group Join Now

ಬಾಗೇಪಲ್ಲಿ: ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು
14 ನೇ ಮತ್ತು ಕೊನೆಯ ಮಗು ಅನೇಕ ಕಷ್ಟ ಕಾರ್ಪಣ್ಯಗಳನ್ನ ಅನುಭವಿಸಿ ಭಾರತ ದೇಶದ ಜನರಿಗೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಬಾಗೇಪಲ್ಲಿ ವಕೀಲರ ಸಂಘ ವತಿಯಿಂದ ಆಯೋಜನೆ ಮಾಡಲಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸುಬೇದಾರ್ ರಾಮ್‌ಜಿ ಮಾಲೋಜಿ ಸಕ್ಪಾಲ್ ಅವರ ಮಗ.
ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು. ಬಾಬಾಸಾಹೇಬರ ತಂದೆ ಸಂತ ಕಬೀರನ ಅನುಯಾಯಿಗಳಾಗಿದ್ದರು ಮತ್ತು ಚೆನ್ನಾಗಿ ಓದಿದ ವ್ಯಕ್ತಿಯೂ ಆಗಿದ್ದರು.
ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ತಂದೆ ಸೇವೆಯಿಂದ ನಿವೃತ್ತರಾದಾಗ ಅವರಿಗೆ ಎರಡು ವರ್ಷ ವಯಸ್ಸಾಗಿತ್ತು.
ಅವರು ಕೇವಲ ಆರು ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು.
ಬಾಬಾಸಾಹೇಬರು ತಮ್ಮ ಆರಂಭಿಕ ಶಿಕ್ಷಣವನ್ನು ಬಾಂಬೆಯಲ್ಲಿ ಪಡೆದರು.
ತನ್ನ ಶಾಲಾ ದಿನಗಳಿಂದಲೂ ಭಾರತದಲ್ಲಿ ಅಸ್ಪೃಶ್ಯರಾಗಿದ್ದರೆ ಏನೆಂದು ಅವರು ತೀವ್ರ ಆಘಾತದಿಂದ ಅರಿತುಕೊಂಡರು.

ದೇಶದಲ್ಲಿ ಅಸ್ಪೃಶ್ಯತೆ ಹೆಚ್ಚು ಕಾಡುತ್ತಿತ್ತು ಅಂತಹ ಅನಿಷ್ಠ ಪದ್ಧತಿಗಳನ್ನು ಅನುಭವಿಸಿದಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು
ಅನೇಕ ಅವಮಾನಗಳನ್ನು ಅನುಭವಿಸಿ ಬೆಳದಂತವರು ಅವರಿಗೆ ಸರಿಯಾದ ಸಮಯಕ್ಕೆ ಶಿಕ್ಷಣ ಸಿಗುತ್ತಿರಲಿಲ್ಲ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶಾಲೆಯ ಹೊರಗಡೆ ಶಿಕ್ಷಣವನ್ನ ಪಡೆಯಬೇಕಾಗಿತ್ತು ಮತ್ತು ಎಲ್ಲರ ಒಟ್ಟಿಗೆ ಶಿಕ್ಷಣ ಪಡಿಲಿಕ್ಕೆ ಅವರಿಗೆ ಅವಕಾಶ ಇರಲಿಲ್ಲ ಮುಟ್ಟಿಸಿಕೊಳ್ಳುತ್ತಿರಲಿಲ್ಲ ಅಂತಹ ಪರಿಸ್ಥಿತಿಯಲ್ಲಿ ಅವರು ಓದಿ ಬೆಳೆದು ವಿಶ್ವಕ್ಕೆ ಮಹಾನ್ ಜ್ಞಾನಿಯಾದರು.

ಡಾ. ಅಂಬೇಡ್ಕರ್ ಅವರು 9 ಪದವಿ 9 ಭಾಷೆ ಅವರು ಓದಿರುವಷ್ಟು ಶಿಕ್ಷಣವನ್ನ ಇದುವರೆಗೂ ಸಹ ಇಡೀ ದೇಶದಲ್ಲಿ ಯಾರು ಓದಿಲ್ಲ ಅವರು ಅನೇಕ ದೇಶಗಳ ಸಂವಿಧಾನಗಳನ್ನ ಓದಿ ಇಡೀ ಭಾರತ ದೇಶಕ್ಕೆ ಸಂವಿಧಾನವನ್ನ ಕೊಡುಗೆಯಾಗಿ ನೀಡಿದ್ದಾರೆ.

ಮುಖ್ಯವಾಗಿ ಈ ದೇಶದ ಜನರಿಗೆ ಹೆಣ್ಣು ಮಕ್ಕಳಿಗೆ ಹೆರಿಗೆ ಸಹಿತ ವೇತನ ಮೊದಲು ಇರಲಿಲ್ಲ ಭಾರತ ದೇಶಕ್ಕೆ ಸಂವಿಧಾನ ಬಂದಮೇಲೆ ಹೆರಿಗೆ ಸಹಿತ ವೇತನ ಕಾನೂನು ಜಾರಿಗೆ ಆಯ್ತು ಸಂವಿಧಾನ
ಈ ದೇಶದ ಜನರಿಗೆ ಕಟ್ಟ ಕಡೆಯ ವ್ಯಕ್ತಿಗೆ ಇಂದು ಹಿಡಿದು ಉನ್ನತ ಮಟ್ಟದ ಅಧಿಕಾರಿಯವರೆಗೂ ಸಮಾನತೆ ನ್ಯಾಯ ಇದೆ ಎಂದರೆ ಅದು ಸಂವಿಧಾನದಿಂದ ಮಾತ್ರ ಅದು ಬಾಬಾ ಸಾಹೇಬರ ಕೊಡುಗೆಯಾಗಿದೆ.

ಬಾಬಾ ಸಾಹೇಬರ ಮೂಲ ಮಂತ್ರ ಶಿಕ್ಷಣ ಸಂಘಟನೆ ಮತ್ತು ಹೋರಾಟ ಅಲ್ಲದೆ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಶಿಕ್ಷಣವನ್ನು ಜಾರಿ ಮಾಡಲಾಗಿದೆ.
ಶಿಕ್ಷಣವೊಂದೇ ನಿಮ್ಮ ಉದ್ದಾರಕ್ಕೆ ಮಾತ್ರ ಎಂದು ಪ್ರಬಲವಾಗಿ ನಂಬಿದ್ದರು ನಮ್ಮ ಬಾಬಾ ಸಾಹೇಬರು.

ಸ್ವತಂತ್ರ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ಇರಲಿಲ್ಲ ಈ ದೇಶಕ್ಕೆ ಸಂವಿಧಾನದಲ್ಲಿ ಸಂವಿಧಾನ ಬಂದ ನಂತರ ಹೆಣ್ಣು ಮಕ್ಕಳಿಗೆ ಸಮಾನ ವೇತನ ಸಮಾನ ಶಿಕ್ಷಣ ಮತದಾನದ ಹಕ್ಕನ್ನು ನೀಡಿದ್ದು ನಮ್ಮ ಭಾರತ ದೇಶದ ಸಂವಿಧಾನ ಡಾಕ್ಟರ್ ಬಾಬಾ ಸಾಹೇಬರ ಕೊಡುಗೆ ಎಂದು ನಾವು ಕರೆಯಬಹುದು .

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿ ಜನಾಂಗಕ್ಕೆ ಸಂವಿಧಾನವನ್ನು ನೀಡಲಿಲ್ಲ ಪ್ರತಿಯೊಂದು ಜಾತಿ ಜನಾಂಗಕ್ಕೂ ಸಂವಿಧಾನವನ್ನು ನೀಡಿದ್ದಾರೆ ಆ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದಂತಹ ಅವಕಾಶಗಳಿದವೇ ನ್ಯಾಯ, ಸಮಾನತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ.
ಆದುದರಿಂದ ಈ ದೇಶದ ಜನರು ಯುವಕರು ಅರಿತು ಸಂವಿಧಾನದ ಆಶಯಗಳನ್ನು ಬಾಬಾ ಸಾಹೇಬರ ಆಶಯಗಳನ್ನು ಇಡೀ ಪ್ರಪಂಚಕ್ಕೆ ತಿಳಿಸುವಂತಹ ಕಾರ್ಯವನ್ನ ನಾವು ಮಾಡಬೇಕು ಎಂದು ತಿಳಿಸಿದರು.

ಈ ದೇಶದ ಯುವಕರು ವಿದೇಶದ ಸಂವಿಧಾನ ಎಲ್ಲಾ ಕಾನೂನುಗಳ ಮಹಾತಾಯಿ ಆ ಸಂವಿಧಾನದ ಆಶಯಗಳನ್ನ ಸಂವಿಧಾನವನ್ನು ಓದಿ ಕಾನೂನಿನ ಜ್ಞಾನವನ್ನು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮಂಜುನಾಥ ಚಾರಿ ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅನೇಕ ಕಷ್ಟದ ದಿನಗಳನ್ನು ಎದುರಿಸಿ ಈ ದೇಶಕ್ಕೆ ಮಹಾನ್ ನಾಯಕರಾಗಿದ್ದಾರೆ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ನ್ಯಾಯ ಸಿಗುವ ಹಾಗೆ ಭಾರತದ ಸಂವಿಧಾನವನ್ನ ಕೊಡುಗೆಯಾಗಿ ನೀಡಿದ್ದಾರೆ ಅಂತಹ ಸಂವಿಧಾನವನ್ನು ಅದರ ಆಶಯಗಳನ್ನು ನಾವು ಮನಗಂಡು ಪ್ರತಿಯೊಬ್ಬರು ಕಾನೂನಿನ ಜ್ಞಾನವನ್ನು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಜೆಎನ್ ಮಂಜುನಾಥ್,
ಉಪಾಧ್ಯಕ್ಷರಾದ ರವಿಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಆರ್ ಜಯಪ್ಪ, ಸಂಘದ ಖಜಾಂಚಿ ಬಿಂದು ಕುಮಾರಿ, ಹಿರಿಯ ವಕೀಲರಾದ ಅಲ್ಲಾಭಕಾಶ್ ,ಕರ್ಣಸಾಗರ ರೆಡ್ಡಿ , ಎಸ್ಎನ್ ನರಸಿಂಹ ರೆಡ್ಡಿ, ಎನ್ ನಂಜಪ್ಪ , ಎಮ್ ಬಿ ಗುರುನಾಥ್ ,ಮುಸ್ತಾಕ್ ಅಹಮದ್, ನಾರಾಯಣರಾವ್, ಅಂಜಿನಪ್ಪ ಬಾಲು ನಾಯಕ್ ಬಾಬು, ಅರುಣ ಪ್ರಮೀಳಾ ,ಸರಸ್ವತಿ, ನಾಗಭೂಷಣ್, ಎಂ ಆರ್ ಮಂಜುನಾಥ್, ಪಿ ಏನ್ ಮಂಜುನಾಥ್, ಶ್ರೀನಾಥ್ ,ಶ್ರೀನಿವಾಸ್, ಆನಂದ್, ತಿರುಮಲೇಶ್, ಸುಧಾಕರ್, ರವನ, ಸತೀಶ, ಮೂರ್ತಿ, ಇತರ ವಕೀಲರ ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸ್ ಅವರು ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!