ಪಾವಗಡ : ತಾಲ್ಲೂಕು ಆಡಳಿತದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಪೂರ್ವಭಾವಿ ಸಭೆಯನ್ನು ದಲಿತ ಮುಖಂಡರು ಒಕ್ಕೊರಲಿನಿಂದ ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.
ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು, ಸರ್ಕಾರದ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಅರ್ಧದಲ್ಲೇ ಸಭೆಯನ್ನು ಬಿಟ್ಟು ಹೊರಬಂದರು.
ಬಳಿಕ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದೇ ವೇಳೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಚಾಲಕರಾದ ಸಿ ಕೆ ತಿಪ್ಪೇಸ್ವಾಮಿ ಮಾತನಾಡಿ ಒಳ ಮೀಸಲಾತಿ ಜಾರಿಗೆ ಆಗ್ರಹ ಮಾದಿಗ ಸಮುದಾಯಕ್ಕೆ ದೀರ್ಘಕಾಲದಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸಚಿವ ಸಂಪುಟದಲ್ಲಿರುವ ಪ್ರಭಾವಿ ದಲಿತ ನಾಯಕರೇ ಒಳ ಮೀಸಲಾತಿಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮುಖಂಡರು ಗಂಭೀರ ಆರೋಪ ಮಾಡಿದರು.
ಸಚಿವರ ವಿರುದ್ಧ ಹರಿಹಾಯ್ದ ಮುಖಂಡರು ಪ್ರತಿಭಟನೆಯ ಸಂದರ್ಭದಲ್ಲಿ ಪ್ರಮುಖವಾಗಿ ಮೂವರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು:
ಸಚಿವ ಎಚ್.ಸಿ. ಮಹದೇವಪ್ಪ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಚಿವ ಪ್ರಿಯಾಂಕ್ ಖರ್ಗೆ ಇವರುಗಳು ಒಳ ಮೀಸಲಾತಿಯ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಮತ್ತು ಮಾದಿಗ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ “ಧಿಕ್ಕಾರ” ಕೂಗಲಾಯಿತು.
ಪತ್ರಿಕಾ ಪ್ರಕಟಣೆಯ ಮುಖ್ಯಾಂಶಗಳು:
”ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇಲ್ಲದಿದ್ದರೆ ಇಂತಹ ಜಯಂತಿ ಸಭೆಗಳನ್ನು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ,” ಎಂದು ಮಾದಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.
ಇದೇ ವೇಳೆಯಲ್ಲಿ. ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ನರಸಿಂಹಪ್ಪ. ಹಿರಿಯ ನಾಯಕ. ಎಸ್ ಹನುಮಂತರಾಯಪ್ಪ. ವೆಟರ್ನರಿ ಉಗ್ರಪ್ಪ. ಪಿ ಹನುಮಂತರಾಯಪ್ಪ. ಡಿಜಿಎಸ್. ನಾರಾಯಣಪ್ಪ. ಕನ್ನಮೇಡಿ ಕೃಷ್ಣಮೂರ್ತಿ. ಡಿಎಸ್ಎಸ್ ಪೆದ್ದಣ್ಣ. ಹೊಸಹಳ್ಳಿ ಮಲ್ಲಿಕಾರ್ಜುನ. ಡಿಎಸ್ಎಸ್ ಗುರುಮೂರ್ತಿ ಬಳಗ ತಾಲೂಕ್ ಸಂಚಾಲಕ ಮದ್ದುಲೇಟಪ್ಪ. ಡಿಎಸ್ಎಸ್ ಕಡಪಲಕೆರೆ ನರಸಿಂಹಪ್ಪ. ಪಾವಗಡ ಟೌನ್. ಕೃಷ್ಣಪ್ಪ. ಗಂಗಾಧರಪ್ಪ. ಮೈಲಾರಪ್ಪ. ದಂಡೋರ ಹನುಮಂತರಾಯಪ್ಪ. ಮರದಾಸನಹಳ್ಳಿ ಕೆಂಚಪ್ಪ. ಕೆ ಪಿ ಲಿಂಗಣ್ಣ. ವೆಂಕಟರಮಣ. ಬಿ ಎಸ್ಪಿ ಹನುಮಂತರಾಯ. ನೆಲಗಾನಹಳ್ಳಿ ಮಂಜುನಾಥ್. ಇನ್ನು ದಲಿತ ಮುಖಂಡರುಗಳು ಹಾಜರಿದ್ದರು.
ವರದಿ : ಶಿವಾನಂದ




