ಸೇಡಂ: ತಾಲೂಕಿನ ಮುಧೋಳ ನಲ್ಲಿ ಸ್ವಾಭಿಮಾನ ನ್ಯಾಯಕ್ಕಾಗಿ ಹೋರಾಡಿದ ಮಹಾಮಾನವತಾವಾದಿ ಸಮಾಜ ಸುಧಾರಕ ವಿಶ್ವಮಾನವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಧೋಳ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹರೀಶ್ ಚಿತ್ತಪಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಕ್ಯಾಂಡಲ್ ಬೆಳಗಿ ಮಹಾಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಯಿತು.
ಈ ವೇಳೆ ಸಮಾಜದ ಮುಖಂಡರಾದ ತಮ್ಮಪ್ಪ ಬಾಗಳಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.
ಈ ಸಂಧರ್ಭದಲ್ಲಿ ವೆಂಕಟಪ್ಪ ಧಾರ, ಹಣಮಂತ ಚಿತ್ತಪಲ್ಲಿ, ರಘು, ಮಹೇಶ್, ಸಂಜು, ಶರಣಪ್ಪ, ವಿಘ್ನೇಶ್, ನವೀನ್, ಭೀಮು, ಚಂದ್ರಪ್ಪ, ರವಿ, ನರೇಶ್, ಲಾಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್




