ಸೇಡಂ: ಅಂಬೇಡ್ಕರ್ ಯುವ ಸೇನೆ ತಾಲೂಕ ಉಪಾಧ್ಯಕ್ಷರಾದ ಮಹದೇವಪ್ಪ ಶಕಲಾಸಪಲ್ಲಿ ಇವರ ಜನ್ಮ ದಿನದ ನಿಮಿತ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್,ಎಸ್,ಎಸ್ ಕ್ಯಾಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೫೦ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಮಹದೇವಪ್ಪ ಅವರಿಗೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಲು ಸನ್ಮಾನ ಮಾಡಿ ಜನ್ಮ ದಿನದ ಶುಭಾಶಯಗಳ ಜೊತೆಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ದೇವಪ್ಪ, ಡಿ,ಎಸ್,ಎಸ್ ತಾಲೂಕ ಅಧ್ಯಕ್ಷರಾದ ಲಾಲಪ್ಪ ತಲಾರಿ, ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ಮಹಾದೇವ ಚಪ್ಪೆಟ್ಲ, ಶ್ರೀನಿವಾಸ್ ಚಂಡರಿಕಿ, ಗೋಪಾಲ್ ಶಕಲಾಸಪಲ್ಲಿ, ವೆಂಕಟೇಶ್, ಯಲ್ಲಾಲಿಂಗ, ರಾಜು, ಬಂಗಾರಿ, ಸಾಯಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




