ಸೇಡಂ:- ನಗರದ ಹೋರ ವಲಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ.ದೇವರಾಜ ಅರಸು ಮೇಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಅಂಬೇಡ್ಕರ್ ಯುವ ಸೇನೆ ಪದಾಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌರ್ಕಯಗಳ ಬಗ್ಗೆ ವಿಕ್ಷಣೆ ಮಾಡಿದರು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಶುಧ್ದ ಕುಡಿಯುವ ನೀರು ಇರುವುದಿಲ್ಲ, ಹಾಗೂ ಶೌಚಲಯಗಳ ವ್ಯವಸ್ಥೆ ತುಂಬ ಹದೆಗಟ್ಟಿರುತ್ತದೆ, ಮತ್ತು ವಿದ್ಯಾರ್ಥಿಗಳಿಗೆ ಮೇನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ, ಎಂದು ವಿದ್ಯಾರ್ಥಿಗಳು ತಿಳಿಸಿರುತ್ತಾರೆ ಇದರ ಕುರಿತು ನಿಲಯ ಪಾಲಕರಿಗೆ ಕರೆ ಮಾಡಿ ಕೇಳಿದರೆ ಕುಡಿಯುವ ನೀರು ದುರಸ್ತಿ ಮಾಡಿಸುತ್ತಿದ್ದೆವೆ ಎಂದು ತಿಳಿಸಿದ್ದರೆ ಹಾಗೂ ತಾಲೂಕ ಅಧಿಕಾರಿಗಳಿಗೆ ಕರೆ ಮಾಡಿದರೆ ನಮ್ಮ ಕರೆಗೆ ಯಾವುದೇ ರೀತಿ ಸ್ಪಂದನೆ ನೀಡಿರುವುದಿಲ್ಲ.
4/5 ದಿನದಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಂಬೇಡ್ಕರ್ ಯುವ ಸೇನೆ ನರೇಶ ನಾಟೇಕಾರ ಮುಧೋಳ ವಲಯ ಅಧ್ಯಕ್ಷರು, ಕೈಲಾಸ ಮೌರ್ಯ ಚಂದಾಪೂರ ಉಪಾಧ್ಯಕ್ಷರು ಬೇಟಿ ಸಮಯದಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರು ಗೋಪಾಲ ಎಲ್ ನಾಟೇಕಾರ್, ವಿಶ್ವನಾಥ ಮಾದವಾರ ಇದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.