Ad imageAd image

ಅಂಬೇಡ್ಕರ ಯಾರು ಅಂಬೇಡ್ಕರ,? ಚೊಚ್ಚಲ ಕೃತಿ ಜನಾರ್ಪಣೆ!

Bharath Vaibhav
ಅಂಬೇಡ್ಕರ ಯಾರು ಅಂಬೇಡ್ಕರ,? ಚೊಚ್ಚಲ ಕೃತಿ ಜನಾರ್ಪಣೆ!
WhatsApp Group Join Now
Telegram Group Join Now

ಸಿಂಧನೂರು : ಜುಲೈ 13 ರಂದು ಕಾಮ್ರೇಡ್ ಆರ್. ಹುಚ್ಚರೆಡ್ಡಿ ವೇದಿಕೆ, ಬೀದಿ ಸಾಲು ಪ್ರಕಾಶನ ಮಸ್ಕಿ ಹಾಗೂ ಕ್ರಾಂತಿಕಾರಿ ಸಂಸ್ಕೃತಿಕ ವೇದಿಕೆ ಆರ್ ಸಿ ಎಫ್. ಸಂಯೋಗದಲ್ಲಿ ಜನಕವಿ ಸಿ. ದಾನಪ್ಪ ನಿಲೋಗಲ್ ಅವರ ಪುತ್ರ ಜನಪರ ಕವಿ ಪ್ರಶಾಂತ್ ದಾನಪ್ಪ ನಿಲೋಗಲ್ ಅವರ ಚೊಚ್ಚಲ ಕೃತಿ ಅಂಬೇಡ್ಕರ ಯಾರು ಅಂಬೇಡ್ಕರ.? ಎಂಬ ಹೋರಾಟದ ಹಾಡುಗಳು ಕೃತಿ ಜನಾರ್ಪಣೆ ಕಾರ್ಯಕ್ರಮ ರವಿವಾರ ನಗರದ ಟೌನ್ ಹಾಲಿನಲ್ಲಿ ಪೋ. ಬಿ. ಕೃಷ್ಣಪ್ಪ ಸಭಾಂಗಣ ಸಿಂಧನೂರಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿತು, ಚಳವಳಿಗಾರರನ್ನು ಒಗ್ಗೂಡಿಸಿ ಅವರಲ್ಲಿ ಜಾಗೃತಿ ಹಾಗೂ ಸಾಮಾಜಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.

ಉಪಸ್ಥಿತಿ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ್ ಅಧ್ಯಕ್ಷರು ಕರ್ನಾಟಕ ಜನಪದ ಅಕಾಡೆಮಿ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಎಚ್. ಎನ್.ಬಡಿಗೇರ್ ಹಿರಿಯ ಹೋರಾಟಗಾರರು ಸಿಂಧನೂರು ಈ ಕೃತಿ ಕುರಿತು ಕಾಮ್ರೆಡ್ ಆರ್. ಮಾನಸಯ್ಯ ಪ್ರಧಾನ ಕಾರ್ಯದರ್ಶಿ ಟಿ ಯು ಸಿ ಐ. ಕೇಂದ್ರ ಸಮಿತಿ ರಾಯಚೂರು ಕೃತಿ ಪರಿಚಯ ನಾರಾಯಣ ಬೆಳಗುರ್ಕಿ ಉಪನ್ಯಾಸಕರು. ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಕ್ರಾಂತಿ ಗೀತೆ ಎಂ. ಗಂಗಾಧರ್ ಆರ್ ಸಿ ಎಫ್. ಕಲಾತಂಡ ಕೃತಿಕಾರರು ಪ್ರಶಾಂತ್ ದಾನಪ್ಪ ಯುವಕವಿ ಮಸ್ಕಿ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಅಂಬಣ್ಣ ಆರೋಲಿಕರ್. ಎಂ. ವಿರುಪಾಕ್ಷಿ. ಡಿಹೆಚ್ ಪೂಜಾರ್. ಶ್ರೀಮತಿ ಚಿನ್ನಮ್ಮ. ಡಾ. ರಾಜಶೇಖರ್ ನಾರನಾಳ ಗಂಗಾವತಿ. ಕೆ ಬಿ. ರಾಜು.ಶ್ರೀಮತಿ ಮೇರಿ ದಾನಪ್ಪ ಮಸ್ಕಿ. ಡಾ. ಹುಸೇನಪ್ಪ ಅಮರಾಪುರ. ಎಂ. ಆರ್. ಬೇರಿ ನರಸಪ್ಪ ಡಿಗ್ರಿ. ಶ್ರೀಮತಿ ವಿಜಯರಾಣಿ ಸಿರವಾರ. ಧರ್ಮರಾಜ್ ಗೋನಾಳ, ಶ್ರೀಮತಿ ವಿರೂಪಮ್ಮ. ಬಿ. ಎನ್. ಯಾರದಿಹಾಳ. ಇದ್ದು ಕಾರ್ಯಕ್ರಮದ ಸಂಯೋಜನೆ ಮೌನೇಶ್ ಜಾಲವಾಡಗಿ ಡಿ ವಿ ಪಿ. ನಡೆಸಿಕೊಟ್ಟರು ಎಚ್. ಕೆ. ದಿದ್ದಿಗಿ ಸಾಹಿತಿ ಸಿಂಧನೂರು ಎಲ್ಲಾ ಗಣ್ಯ ಮಾನ್ಯರಿಗೆ ಸ್ವಾಗತ ಕೋರುವರು ಹನುಮಂತ ಹಂಪನಾಳ ಡಿಎಸ್ಎಸ್. ಭೀಮ ಘರ್ಜನೆ, ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿರಾಮ ಹೇಳಿದರು

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!