ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಹಿರಿಯ ಜೀವಿ ಯಲ್ಲವ್ವ ಕಾಂಬಳೆ ಅವರು ಶುಕ್ರವಾರ ರಂದು ನಿಧನ ಹೊಂದಿದರು. ವಿಷೇಶ ಎಂದರೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಬೆಳೆಗಿ ಸ್ವಾಗತಿಸಿದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6ರಂದು ನಿಧನರಾಗಿದ್ದಾರೆ.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೆ ಇವರು ಕೂಡ ನಿರ್ವಾಣ ಹೊಂದಿದ್ದಾರೆ. ಇವರು ಡಾ ಅಂಬೇಡ್ಕರ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಇವರ ನಿಧನಕ್ಕೆ ಐಗಳಿ ಗ್ರಾಮಸ್ಥರು ಹಾಗೂ ರಾಜಕೀಯ ಮುಖಂಡರು ದಲಿತ ಮುಖಂಡರು ಸಂತಾಪ ಸೂಚಿಸಿದ್ದಾರೆ. ಅಪಾರ ಬಂಧು ಬಳಗ ಅಗಲಿದ್ದಾರೆ.