ಯಳಂದೂರು : ಡಾ.ಬಿ. ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಹಣ ದಿನದ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿಯ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇಣದಬತ್ತಿಯನ್ನು ಹಚ್ಚಿ ಮೌನ ಮೆರವಣಿಗೆ ನಡೆಸಲಾಯಿತು.
ಮೌನ ಮೆರವಣಿಗೆಯಲ್ಲಿ ಮಾಜಿ ಎಂ ಎಲ್ಎ ಜಿಎನ್ ನಂಜುಂಡಸ್ವಾಮಿ ಭಾಗವಹಿಸಿದರು.
ನಂತರ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷರಾದ ಕೆಸ್ತೂರು ಸಿದ್ದರಾಜು ರವರು ಮಾತನಾಡಿ ಡಿಸಂಬರ್ 6ನೇತಾರೀಕು ದಲಿತ ಸೂರ್ಯ ಅಂಬೇಡ್ಕರ್ ರವರು ಪರಿನಿಬ್ಬಾಣ ಹೊಂದಿದ್ದ ದಿನ ಇಡೀ ಸೋಷಿತ ಸಮಾಜದ ಸಮಾಜವು ತಬ್ಬಲಿಯಾದ ದಿನ ಪ್ರಪಂಚದ ಕೆಲವು ರಾಷ್ಟ್ರಗಳು ಅಂಬೇಡ್ಕರ್ ರವರು ಮರಣ ಹೊಂದಿದಾಗ ತಮ್ಮ ದೇಶಗಳ ಧ್ವಜವನ್ನ ಕೆಳಗಡೆ ಇಳಿಸಿ ಗೌರವ ಸಲ್ಲಿಸಿದೆ ಅಂತಹ ವ್ಯಕ್ತಿ ಮಹನಾಯಕ ಅಂಬೇಡ್ಕರ್ ರವರು ಮಾತ್ರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಬಳೇಪೇಟೆಯ ಹಾಗೂ ಗೌತಮ್ ಬಡಾವಣೆಯ ಯಜಮಾನ್ರುಗಳು, ಮುಖಂಡರುಗಳು, ಯುವಕರು, ವಿದ್ಯಾರ್ಥಿಗಳು,ಮಕ್ಕಳು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




