ವಿಜಯಪುರ :ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿಗೆ ಕೆಸರು ಬಳೆದು ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಿಕೇರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಬಾ ಸಾಹೇಬರಿಗೆ ಅಪಮಾನ ಮಾಡಿದ್ದು ದಲಿತ ಕಾರ್ಯಕರ್ತರೆ ಎಂಬುವುದು ವಿಪರ್ಯಾಸ.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ದಿನಾಂಕ/೭-೬-೨೦೨೫ರಂದು ರವಿವಾರ ಈ ಘಟನೆ ನಡೆದಿದ್ದು. ಬಾಬಾ ಸಾಹೇಬರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳು ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವುದು ಅವರ ಮೂಲ ಉದ್ದೇಶದಂತೆ ಕಂಡು ಬರುತ್ತದೆ. ಆದ್ದರಿಂದಲೇ ದಲಿತ ಕಾರ್ಯಕರ್ತರೇ ಸ್ವತಃ ಮೂರ್ತಿಗೆ ಅಪಮಾನ ಮಾಡಿದ್ದಾರೆ.
ಇಡೀ ತಾಲೂಕುದ್ಯಾದಂತ ಈ ಸುದ್ದಿ ಹರಡಿ ಹಲವು ಸಂಘಟನೆಗಳು ಗ್ರಾಮದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡವು ರಸ್ತೆಯನ್ನು ತಡೆದು ಟಾಯರ್ ಗಳಿಗೆ ಬೆಂಕಿ ಹಾಕಿ ಉಗ್ರವಾದ ಪ್ರತಿಭಟನೆ ಮಾಡಲಾಯಿತು.
ವಿಷಯ ತಿಳಿದ ಸಿಂದಗಿ ತಾಲೂಕಿನ ಸಿಪಿಐ ಸಾಹೇಬರು ಮತ್ತು ಕಲಿಕೇರಿ ಪಿಎಸ್ಐ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು. ಗ್ರಾಮದಲ್ಲಿ ಇದರಿಂದಾಗಿ ಪ್ರಸ್ತುಬ್ಬ ವಾತಾವರಣ ನಿರ್ಮಾಣವಾಗಿತ್ತು ಹಲವು ಅಮಾಯಕರು ಇದರಿಂದ ಊರು ತೊರೆದು ಹೋಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ಮುತ್ತು ಲಕ್ಷ್ಮಣ್ ಬನ್ನಟ್ಟಿ ಮತ್ತು ಇತರ ಆರೋಪಿಗಳನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಮೂಲಗಳು ತಿಳಿಸಿದ್ದಾವೆ
ವರದಿ: ಸಾಯಬಣ್ಣ ಮಾದರ (ಸಲಾದಹಳ್ಳಿ )




