Ad imageAd image

ಸಾಮಾಜಿಕ ಸೇವೆಗೆ ಸದಾ ಸಿದ್ಧ! ಅಂಬಿ ರಾಜ್ ಮ್ಯಾಕಲ್!

Bharath Vaibhav
ಸಾಮಾಜಿಕ ಸೇವೆಗೆ ಸದಾ ಸಿದ್ಧ! ಅಂಬಿ ರಾಜ್ ಮ್ಯಾಕಲ್!
WhatsApp Group Join Now
Telegram Group Join Now

ಸಿಂಧನೂರು : ಜೂನ್ 8, ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಅಧ್ಯಕ್ಷ ಅಂಬಿರಾಜ್ ಮ್ಯಾಕಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರು ಸಭೆ ಸೇರಿ ಪ್ರತಿ ತಿಂಗಳ ಮಾಡುವ ಸೇವಾ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಮಾತನಾಡಿ ನಮ್ಮ ಸೇನೆ ತತ್ವ ಸಿದ್ಧಾಂತದಡಿಯಲ್ಲಿ ನಮ್ಮ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಟಿ. ರಮೇಶ್ ಗೌಡರು ಮಾರ್ಗದರ್ಶನದಂತೆ ನಮ್ಮ ಹಕ್ಕುಗಳಿಗಾಗಿ ಕನ್ನಡ. ನಾಡು. ನುಡಿ. ಜಲ. ಭಾಷೆ. ಹಕ್ಕಿಗೆಗಾಗಿ ಹೋರಾಟಗಳನ್ನು ಮಾಡುತ್ತಾ ಮತ್ತು ಸಮಾಜದಲ್ಲಿ ಅತಿ ಕಡು ಬಡವರನ್ನು ಗುರುತಿಸಿ ಅವರಿಗೆ ನಮ್ಮ ಸೇನೆಯ ವತಿಯಿಂದ ಕಾರ್ಯಕರ್ತರೆಲ್ಲರೂ ಸೇರಿ ನಾವು ಯಾರನ್ನು ಕೈ ಚಾಚದೆ ನಮ್ಮ ಸ್ವಂತ ದುಡಿಮೆಯಲ್ಲಿ ಅವರಿಗೆ ತಿಂಗಳಿಗಾಗುವಷ್ಟು ದವಸ ಧಾನ್ಯಗಳು ನೀಡುತ್ತಾ ಅವರಿಗೆ ಆತ್ಮಸ್ಥೈರವವನ್ನು ತುಂಬುವ ಮೂಲಕ ನಾವು ಮುನ್ನಡೆಯುತ್ತೇವೆ ಅದೇ ರೀತಿಯಾಗಿ ರವಿವಾರ ಜೂನ್ 8ರಂದು ನಗರದ ಬಸವೇಶ್ವರ ಕಾಲೋನಿಯ ಜಾವೀದ್. ಸಲ್ಮಾ ಬೇಗಮ್ ದಂಪತಿಗೆ ಮೂರು ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿದ್ದು ಅವರ ಪೋಷಣೆಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಿದ್ದು ಅದನ್ನು ನಮ್ಮ ಕರ್ನಾಟಕ ಸೇನೆ ಹರಿತು ಅವರ ಮನೆಗೆ ಭೇಟಿ ನೀಡಿ ಸಾಮಾಜಿಕ ಸೇವಾ ಕಾರ್ಯಕ್ರಮದಡಿಯಲ್ಲಿ ಆ ಕುಟುಂಬಕ್ಕೆ ತಿಂಗಳ ಪೂರ್ತಿ ಹಾಗುವ ದವಸ ಧಾನ್ಯಗಳನ್ನು ವಿತರಿಸಲಾಯಿತು.

ಇದೇ ರೀತಿ ನಾವು ನಮ್ಮ ಕಾರ್ಯಕರ್ತರ ಸಹಾಯ ಸಹಕಾರ ದೊಂದಿಗೆ ಪ್ರತಿ ತಿಂಗಳ ಇಂತಹ ಸೇವಾ ಕಾರ್ಯಕ್ರಮಗಳನ್ನು ಮಾಡಲು ನಾವು ಇಚ್ಚಿಸಿದ್ದೇವೆ ಎಂದು ಅಂಬಿ ರಾಜ್ ಮ್ಯಾಕಲ್ ತಿಳಿಸಿದರು ಈ ಸಂದರ್ಭದಲ್ಲಿ, ದುರುಗೇಶ್ ಬಾಲಿ ಕಾರ್ಮಿಕ ಘಟಕ ತಾಲೂಕಾಧ್ಯಕ್ಷರು. ಫಾತಿಮಾ ಮಹಿಳಾ ಘಟಕ ತಾಲೂಕಾಧ್ಯಕ್ಷರು. ವಿಜಯ್ ಕುಮಾರ್ ಅಂಬಾಮಠ ತಾಲೂಕ ಪ್ರಧಾನ ಕಾರ್ಯದರ್ಶಿಗಳು. ರೇಣುಕ ನಾಯಕ್ ನಗರ ಘಟಕ ಮಹಿಳಾ ಅಧ್ಯಕ್ಷರು. ಫಕ್ರುದ್ದೀನ್ ನಗರ ಯುವ ಘಟಕ ಅಧ್ಯಕ್ಷರು. ಮುರ್ತುಜಾ ಹೊಸಳ್ಳಿ ಗ್ರಾಮ ಘಟಕ ಅಧ್ಯಕ್ಷರು. ಮಹಮ್ಮದ್ ರಂಗಾಪುರ್ ಕ್ಯಾಂಪ್ ನಗರ ಘಟಕ ಅಧ್ಯಕ್ಷರು ಇನ್ನು ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!