ಸೇಡಂ: ತಾಲೂಕಿನ ಬಟಗೇರಾ ಕೆ ಗ್ರಾಮದಲ್ಲಿ ಕೂಲಿ ಕಬ್ಬಲಿಗ ಸಮಾಜದ ವತಿಯಿಂದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ನವರ 906ನೇ ಜಯಂತೋತ್ಸವ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ ಬಿ ಹಿರೇಮಠ ನವರು ಕೂಲಿ ಕಬ್ಬಲಿಗ ಸಮಾಜ ಯುವಕರ ಬಳಗಕ್ಕೆ ಶುಭಾಶಯಗಳು ಕೋರಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲಾರು ಒಂದು ಆಗಬೇಕು ಮತ್ತು ಎಲ್ಲಾ ಸಮಾಜದ ಬಾಂಧವರು ನಮ್ಮವರೆಂದು ಪ್ರೀತಿಸಬೇಕು ಮತ್ತು ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ನವರ ತಮ್ಮ ವಚನಗಳ ಮೂಲಕ ಜೀವನ ಮೌಲ್ಯವನ್ನು ಸಾರಿದ ಶ್ರೇಷ್ಠ ವಚನಕಾರರು ಚೌಡಯ್ಯನವರ ವಚನಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ತಿಳಿದುಕೊಂಡು ಸಮಾಜದಲ್ಲಿ ಉತ್ತಮವಾದ ರೀತಿಯಲ್ಲಿ ಬೆಳವಣಿಗೆ ಕಾಣಬೇಕೆಂದು ತಿಳಿಸಿದರು.
ಮೃತ್ಯುಂಜಯ ಸ್ವಾಮಿ, ಮಲಕಪ್ಪ ಅವಮೋರ, ಮುರುಗೇಶ್ ವಾಲಿಕಾರ್, ಈಶ್ವರ್ ನಾಟಿಕರ್, ಸದಾನಂದ ಪೆದನೂರು, ದಶರಥ ಮೇಲಿಗೆರಿ, ಸಾಬಣ್ಣ ವಾಲಿಕರ್, ಭರತ್ ಕ್ಯಾತನಪಲ್ಲಿ, ಭೀಮಶೆಪ್ಪ ಪಾಖಲ್ ಸೇರಿದಂತೆ ಇನ್ನಿತರರು ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




