ಮುದಗಲ್ಲ : ಅಂಬಿಗರ ಚೌಡಯ್ಯ ಜಯಂತಿಯನ್ನು ಪುರಸಭೆ ಹಾಗೂ ನಾಡ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಅಂಬಿಗರ ಚೌಡಯ್ಯ ಜಯಂತಿಯನ್ನು ಪುರಸಭೆ ಯಲ್ಲಿ ಸಿಬ್ಬಂದಿ ಚನ್ನಮ್ಮ ದಳವಾಯಿ
ಹಿರೇಮಠ ಅವರು ಹಾಗೂ ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ತುಲಜರಾಮ ಸಿಂಗ್ ಅವರು ಅಂಬಿಗರ ಚೌಡಯ್ಯ ಪೋಟೋ ಪೂಜೆ ಸಲ್ಲಿಸಿದರು.

ಉಪ ತಹಶೀಲ್ದಾರ್ ತುಲಜರಾಮ ಸಿಂಗ್ ಅವರು ನಂತರ ಮಾತನಾಡಿದ ಅವರು, ಉಪ ‘ಅಂಬಿಗರ ಚೌಡಯ್ಯ ನಿಷ್ಠುರವಾದಿ ವಚನಕಾರರಾಗಿದ್ದು, 12ನೇ ಶತಮಾನದ ಅನುಭವ ಮಂಟಪದಲ್ಲಿ ಮೊದಲ ಪಂಕ್ತಿಯಲ್ಲಿ ಇದ್ದವರು. ಇವರ ಅಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗ ಬೇಕು’ ಎಂದರು.

ಪುರಸಭೆ ಯ ಮುಖ್ಯಾಧಿಕಾರಿ ನರಸರಡ್ಡಿ ಅವರು ಮಾತನಾಡಿ, ‘ಚೌಡಯ್ಯ ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವಂತಹ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಂತಹ ಇಬ್ಬರು ದಿಟ್ಟತನ ವಚನಕಾರರೆಂದರೆ ಸಿಡಿಲ ನುಡಿ ಸರ್ವಜ್ಙ ಮತ್ತು ಅಂಬಿಗರ ಚೌಡಯ್ಯ’ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾದ ಬಾಬು ಉಪ್ಪಾರ , ಹುಸೇನ್ ಅಲ್ಲಿ ಮಕಾದಾರ್,ಪುರಸಭೆ ಮ್ಯಾನೇಜರ್ ಸುರೇಶ್ ,ಶಿವರಾಜ ,ಬಸವರಾಜ ಹೂನ್ನೂರು ,ಸಂಜು ಕುಮಾರ್, ಪವನ್ ಕುಮಾರ್ ,ಪೌರ ಕಾರ್ಮಿಕರು ಉಪಸ್ಥಿತರಿದ್ದರು
ವರದಿ:ಮಂಜುನಾಥ ಕುಂಬಾರ




