ವಿಜಯಪುರ: ಪ್ರವಾಸೋದ್ಯಮದ ದೃಷ್ಟಿಯೊಂದಿಗೆ ಸಾಹಸಯಾನದ ಗಮನಾರ್ಹ ಪ್ರಯಾಣದಲ್ಲಿ ಆರ್. ಅನನ್ಯಾ ಕರ್ನಾಟಕದಾದ್ಯಂತ ಎಲ್ಲಾ 31 ಜಿಲ್ಲೆಗಳಾದ್ಯಂತ ಮೂರು ತಿಂಗಳ ಮಹತ್ವಾಕಾಂಕ್ಷೆಯ ಸಾಹಸಯಾನ ಕೈಗೊಂಡಿದ್ದಾರೆ.
25 ವರ್ಷದ ಯುವತಿ ಪ್ರಧಾನವಾಗಿ ಸಾಹಸ ಪ್ರವಾಸೋದ್ಯಮ ತಾಣವಾಗಿ ರಾಜ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಹೊಂದಿದ್ದಾರೆ. ಅಂತೆಯೇ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸಬಹುದು ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನ ಲಗ್ಗೆರೆ ನಿವಾಸಿಯಾಗಿರುವ ಅನನ್ಯಾ, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಯಾವಾಗಲೂ ಅನ್ವೇಷಣೆ ಮತ್ತು ಸಾಹಸದ ಕಡೆಗೆ ಒಲವನ್ನು ಹೊಂದಿದ್ದ ಅವರು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಟ್ರಾವೆಲ್ ಎಂಬ ಸ್ಟಾರ್ಟಪ್ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಪ್ರಯಾಣ ಉದ್ಯಮದಲ್ಲಿ ಅಮೂಲ್ಯವಾದ ಅನುಭವವನ್ನು ಪಡೆದ್ದಾರೆ. ಆದಾಗ್ಯೂ, ಪ್ರಯಾಣದ ಮೇಲಿನ ಪ್ರೀತಿಗಾಗಿ ಸ್ವತಂತ್ರವಾಗಿ ಏನನ್ನಾದರೂ ಮಾಡುವ ಆಲೋಚನೆಯು ಆಕೆಯನ್ನು ಕಾಡುತ್ತಲೇ ಇತ್ತು.
ಅನನ್ಯಾ ಕಾಲೇಜ್ನಲ್ಲಿದಾಗ ಟ್ರೆಕ್ಕಿಂಗ್, ಪಾದಯಾತ್ರೆ, ಬಂಡೆಗಳನ್ನು ಹತ್ತುವುದು ಮತ್ತು ರಾಪ್ಪೆಲ್ ಮಾಡುವ ಸಾಹಸದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಈ ಉತ್ಸಾಹವು ತನ್ನ ವೃತ್ತಿಪರ ಪರಿಣತಿಯೊಂದಿಗೆ ಸೇರಿಕೊಂಡು, ಸಾಹಸ ಪ್ರವಾಸೋದ್ಯಮದತ್ತ ಗಮನಹರಿಸಿ ಕರ್ನಾಟಕದ ಮೂಲಕ ವಿಶೇಷವಾದ ಸಾಹಸಯಾನಕ್ಕೆ ಕಾರಣವಾಯಿತು.
ಕರ್ನಾಟಕದ ಸಾಹಸ ಸಾಮರ್ಥ್ಯವನ್ನು ಅನ್ವೇಷಿಸಲು ನಿರ್ಧರಿಸಿದ ಅನನ್ಯಾ ಜನವರಿ 25 ರಂದು ಭಾರತೀಯ ಪ್ರವಾಸೋದ್ಯಮ ದಿನದಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಪ್ರಯಾಣಿಸುತ್ತೇನೆ. ಪ್ರತಿ ಜಿಲ್ಲೆಯಲ್ಲಿ ಎರಡರಿಂದ ಮೂರು ದಿನಗಳನ್ನು ಕಳೆಯುತ್ತೇನೆ. ಎಲ್ಲಾ ಜನಪ್ರಿಯ ಪ್ರವಾಸಿ ತಾಣ ತಲುಪಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಪ್ರತಿ ಜಿಲ್ಲೆಗೆ ಹೆಸರುವಾಸಿಯಾದ ಸಾಹಸ ಚಟುವಟಿಕೆಗಳನ್ನು ಆಯ್ಕೆ ಮಾಡಿದ್ದೇನೆ, ಎಂದು ಅವರು ಹೇಳಿದರು.