ಡಾ. ಬಿ ಆರ್ ಅಂಬೇಡ್ಕರ್ ಅವರು ಜವರಲಾಲ್ ನೆಹರು ಅವರಿಗೆ ಅಲ್ಪಸಂಖ್ಯಾತರನ್ನು ಬಹಳಷ್ಟು ಓಲೈಸಿಕೊಳ್ಳುತ್ತಿದ್ದೀರಿ ಎಂದು ಪತ್ರ ಬರೆದಿದ್ದರು ಆ ಪತ್ರ ಎಲ್ಲಿ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಅಮೀನ್ ರೆಡ್ಡಿ ಯಾಳಗಿಯವರು ಅಲ್ಪಸಂಖ್ಯಾತರ ಮತ್ತು ದಲಿತರ ಮದ್ಯ ವೈಮನಸು ಮೂಡಿಸುವ ಪತ್ರಿಕೆಯಲ್ಲಿ ಹೇಳಿಕೆ ನೀಡಿರೋದು ಖಂಡನೀಯ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್.ಅಂಬೇಡ್ಕರ ಅವರನ್ನು ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಇವರನ್ನು ಓಲೈಸಿಕೊಳ್ಳಲು ಅಂಬೇಡ್ಕರ್ ವಿರೋಧಿ ದಲಿತ ವಿರೋಧಿ ನೀತಿಯನ್ನು ಅನುಸರಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ ಯವರು ದಲಿತರ ಮತ್ತು ಅಲ್ಪಸಂಖ್ಯಾತರ ಮಧ್ಯೆ ಕೋಮುಗಲಭೆ ಸೃಷ್ಟಿಸುವಂತಹ ಪತ್ರಿಕೆ ಹೇಳಿಕೆ ಖಂಡನಿಯವಾಗಿದೆ .
ಇದರಿಂದ ದಲಿತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಅಮೀನ್ ರೆಡ್ಡಿ ಯಾಳಗಿ ಅವರು ಕೋಮುವಾದಿ ಪಕ್ಷದ ಜೊತೆ ಗುರುತಿಸಿಕೊಂಡಿರುವುದರಿಂದ ಇಂಥ ಹೇಳಿಕೆ ನೀಡುತ್ತಿರುವುದು ಸಹಜ ಇಂಥ ಹೇಳಿಕೆಯನ್ನು ನೀಡುವುದು ಖಂಡನಿಯ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರರಾದ ಚಂದ್ರಶೇಖರ್ ಕಟ್ಟಿಮನಿಯವರು ಖಂಡಿಸಿದ್ದಾರೆ.