Ad imageAd image

ಧರ್ಮ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ತಡೆಗೆ ಹೊಸ ಕಾನೂನು : ಅಮಿತ್ ಶಾ 

Bharath Vaibhav
ಧರ್ಮ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ತಡೆಗೆ ಹೊಸ ಕಾನೂನು : ಅಮಿತ್ ಶಾ 
WhatsApp Group Join Now
Telegram Group Join Now

ನವದೆಹಲಿ : ಧರ್ಮಸ್ಥಳ ಪ್ರಕರಣದ ತನಿಖೆ NIA ಗೆ ವಹಿಸಲು ಪಟ್ಟು ಹಿಡಿಯಲಾಗಿದ್ದು, ಇದೀಗ ದೆಹಲಿಯಲ್ಲಿ ಕರ್ನಾಟಕದ ಸ್ವಾಮೀಜಿಗಳು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

ವಚನಾನಂದ ಸ್ವಾಮೀಜಿಗಳ ನೇತೃತ್ವ ಒಟ್ಟು 8 ಮಠದ ಸ್ವಾಮೀಜಿಗಳ ನಿಯೋಗ ತಂಡ ಭೇಟಿ ನೀಡಿ ಪ್ರಕರಣದ ತನಿಖೆ ವಹಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಸ್ವಾಮೀಜಿಗಳಿಗೆ ಸ್ಪಂದಿಸಿದ ನೀಡಿದ ಅಮಿತ್ ಶಾ ಧರ್ಮಸ್ಥಳ ಕೇಸ್ ಬಗ್ಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುತ್ತಿದ್ದು, ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್ ಶಾ ಪ್ರತಿಕ್ರಿಯೆ ನೀಡಿದರು. ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.

ಧರ್ಮ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ತಡೆಗೆ ಹೊಸ ಕಾನೂನು ಜಾರಿಗೊಳಿಸಲಾಗುತ್ತೆ ಸಮಾಜವನ್ನು ಜಾಗೃತಿಗೊಳಿಸಿ ಎಂದು ಸ್ವಾಮೀಜಿಗಳಿಗೆ ಅಮಿತ್ ಶಾ ಸೂಚನೆ ನೀಡಿದರು.

ಬುರುಡೆ ಪ್ರಕರಣದ ಮಾಹಿತಿಯನ್ನು ಇದೆ ವೇಳೆ ಅಮಿತ್ ಶಾ ಸ್ವಾಮೀಜಿಗಳಿಂದ ಮಾಹಿತಿ ಪಡೆದುಕೊಂಡರು. ಧರ್ಮಸ್ಥಳ ಬುರುಡೆ ಕೇಸ್ ಬಗ್ಗೆ ಸ್ವಾಮಿಜಿಗಳಿಂದ ಅಮಿತ್ ಶಾ ಮಾಹಿತಿ ಸಂಗ್ರಹಿಸಿದ್ದಾರೆ.

ಬಾಹುಬಲಿ ಬೆಟ್ಟ ಉತ್ಕನನ ಕಾರ್ಯಾಚರಣೆ ನಡೆದಿದೆ. ಶಬರಿಮಲೆ, ತಿರುಪತಿ ಬಳಿಕ ಧರ್ಮಸ್ಥಳ ಟಾರ್ಗೆಟ್ ಮಾಡಲಾಗಿದೆ ಧರ್ಮ ಕ್ಷೇತ್ರ ಸಂಶಯದಿಂದ ನೋಡುವಂತೆ ಷಡ್ಯಂತರ ರೂಪಿಸಲಾಗಿದೆ ಎಂದು ಸ್ವಾಮೀಜಿಗಳನ್ನು ಯೋಗ ಅಮಿತ್ ಶಾ ಅವರಿಗೆ ಮಾಹಿತಿ ನೀಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!