ಸಿಂಧನೂರು : ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ “ಇತ್ತೀಚಿಗೆ ಅಂಬೇಡ್ಕರ್ ಜಪ ಫ್ಯಾಷನ್ ಆಗಿದ್ದು ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ‘ಶಾ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಅಮಿತ್ ಶಾ ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ರಾಜೀನಾಮೆ ನೀಡಬೇಕೆಂದು ರಾಯಚೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಹೊಳೆಯಪ್ಪ ದಿದ್ದಿಗಿ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ, ಮುಖಂಡರಾದ ಪಂಪಾಪತಿ ತಿಡಿಗೋಳ, ಮುತ್ತು ಸಾಗರ್ ಸಿಂಧನೂರು, ಚಿಪುರಪ್ಪ ತುರ್ವಿಹಾಳ, ಬಸವರಾಜ ಸುಕಲ್ಪೇಟೆ ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ