ಯಳಂದೂರು: ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಯಳಂದೂರು ತಾಲ್ಲೂಕು ವಕೀಲರ ಸಂಘದಿಂದ ಕಲಾಪದಿಂದ ಹೊರ ಉಳಿದು ಪ್ರತಿಭಟನೆ ನಡೆಸಿದರು.
ವಕೀಲರು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ ಈ ದಿನ ಯಳಂದೂರು ತಾಲ್ಲೂಕು ವಕೀಲರ ಸಂಘದಿಂದ ಅಮಿತ್ ಶಾ ವಿರುದ್ಧ ಕಲಾಪದಿಂದ ಹೊರ ಉಳಿದು ಪ್ರತಿಭಟನೆಯನ್ನು ನಡೆಸಿದ್ದೇವೆ,
ಏನು ಅಮಿತ್ ಶಾ ರವರು ಅಂಬೇಡ್ಕರ್ ರವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ, ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯ ವಾಗುತ್ತಿತ್ತು ಎಂಬ ಹೇಳಿಕೆಯು ವಿರೋಧಿ ಮನೋಭಾವ ಎದ್ದು ಕಾಣುತ್ತಿದೆ, ಅವರು ಬಹಿರಂಗವಾಗಿ ಕ್ಷೇಮೆ ಯಾಚಿಸಬೇಕು ಹಾಗೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತಹಸೀಲ್ದಾರ್ ರವರ ಮುಖಂತರ ರಾಷ್ಟ್ರಪತಿ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಕುಮಾರಸ್ವಾಮಿ,ಸಂಪತ್ ಕುಮಾರ್,ಸಿ. ಸಿದ್ದರಾಜು, ನಾಗರಾಜ್ CRN, ಎಂ. ರಾಜಣ್ಣ, C.M. ಮಹದೇವಸ್ವಾಮಿ, ಎಂ. ರವೀಶ್, K. B. ಶಶಿದರ್, ಶ್ರೀನಿವಾಸ್ ಮೂರ್ತಿ, ಎಂ. ನಾಗರಾಜ್, ಗೌಡಳ್ಳಿ ಮಹೇಶ್, ಅಶ್ವಿನ್ ಕುಮಾರ್, ಕಾಂತರಾಜು, ಕುಮಾರಸ್ವಾಮಿ ಎಂ, ಕುಮಾರಸ್ವಾಮಿ. ಆರ್, C.ನಂಜುಂಡಸ್ವಾಮಿ ಮಹಿಳಾ ವಕೀಲರಾದ ಚಂದನ, ಮೇಘನ ಹಾಗೂ ಮುಂತಾದವರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ