Ad imageAd image

ಅಮಿತ್ ಶಾ ಹೇಳಿಕೆ ಖಂಡನೀಯ: ಬಸವರಾಜ ಬಂಕದಮನಿ.

Bharath Vaibhav
ಅಮಿತ್ ಶಾ ಹೇಳಿಕೆ ಖಂಡನೀಯ: ಬಸವರಾಜ ಬಂಕದಮನಿ.
WhatsApp Group Join Now
Telegram Group Join Now

ಮುದಗಲ್ಲ :- ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಎನ್ನುವುದು ಕೆಲವರಿಗೆ ವ್ಯಸನವಾಗಿದೆ ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸುವುದರ ಜೊತೆಗೆ ದೇಶದ ಸಂವಿಧಾನವನ್ನೂ ಅವಮಾನಿಸಿದ್ದಾರೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ’ ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕದ ಅಧ್ಯಕ್ಷರಾದ ಬಸವರಾಜ ಬಂಕದಮನೆ ಹೇಳಿದ್ದಾರೆ.

‘ಅಂಬೇಡ್ಕರ್ ನಮಗೆ ವ್ಯಸನ ಅಲ್ಲ ನಮ್ಮ ಪಾಲಿನ ದೇವರು, ನಿತ್ಯ ಸ್ಮರಣೆ, ನಮ್ಮ ಉಸಿರು ಇರುವವರೆಗೆ ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ಇಂತಹ ಶ್ರೇಷ್ಠ ದಾರ್ಶನಿಕರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರಿರುವ ಅಮಿತ್ ಶಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಂಥವರು ಸಂಸತ್ತಿನಲ್ಲಿ ಇರಲು ಯೋಗ್ಯರಲ್ಲ‌. ತಮ್ಮ ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು’ ಎಂದು ಆಗ್ರಹಿಸಿದ್ದಾರೆ.

‘ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಅಮಿತ್‌ಶಾ ಇಂದು ಗೃಹ ಸಚಿವರಾಗಲು ಸಾಧ್ಯವಿರಲಿಲ್ಲ ಎಂಬುದನ್ನು ಅರಿಯಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:-ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!