ಅಥಣಿ :-ಹಣಮಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ: 19-8-2024 ರಿಂದ 21 ವರಿಗೆ ಜಾತ್ರೆ ಅತೀ ವಿಜೃಂಭಣೆಯಿಂದ ಜರುಗುತ್ತಿದೆ
ಇಂದು ಮೂರನೇ ಶ್ರಾವಣ ಸೋಮವಾರ ಶ್ರೀ ಅಮೋಘಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಂಡಾರದ ಪೂಜೆ ಮತ್ತು ಎಲೆಪೂಜಾ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಿದ್ದರ ಭೇಟಿ ಹಣಮಾಪುರ ಅಮೋಘಸಿದ್ಧ ಹಣಮಾಪುರ ಯಲ್ಲಮ್ಮ ದೇವಿ ಕೌವಲಗುಡ ಕರಿಯೋಗಿಸಿದ್ದ ಅಥಣಿ ಮಳೆಗಾಲ ಸಿದ್ಧ ಮಾಯನಟ್ಟಿ ಅಮೋಘಸಿದ್ಧ ಬೇವನೂರು ಅಮೋಘಸಿದ್ದ ಪಾಂಡೆಗಾವ ಅಮೋಘಸಿದ್ದ ಸುರೇಗಾಂವ ಮಳೆಗಾಲಸಿದ್ಧ ಹಣಮಾಪುರ ಜಟ್ಟಿಂಗರಾಯ ದೇವರ ಪಲ್ಲಕ್ಕಿಗಳೂ ಭೇಟಿಯಾಗುವದರೋಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ.
ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದುಕೋಳ್ಳುವ ದೃಶ್ಯಗಳ ಸಹ ಕಂಡುಬಂದವು.
ವರದಿ:- ಸುಕುಮಾರ ಮಾದರ