ಬಾಗಲಕೋಟೆ ; –ಕಳೆದ ಆಗಸ್ಟ್ 30 ರಂದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನ ಗಲಭೆ ಸೃಷ್ಟಿಸಲು ಗುಂಡಾಗಳನ್ನು ಕರೆಸಿದ್ದ ಘಟನೆ, ಇದೊಂದು ಹೇಯ ಕೃತ್ಯವಾಗಿದ್ದು, ಈ ಘಟನೆಯನ್ನು ಖಂಡಿಸಿ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು.
ತಪ್ಪಿತಸ್ಥರು ಯಾರೇ ಆಗಿದ್ದರೂ ಸಹ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಾದಾಮಿ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಮುಖಂಡರು ಬಾಗಲಕೋಟೆ ಜಿಲ್ಲಾ ವರಿಷ್ಠಾಧಿಕಾರಿ (ಪೊಲೀಸ್ ಸೂಪರಿಂಟೆಂಡೆಂಟ್ (SP) ಯವರಿಗೆ ಹಾಗೂ *ಕರ್ನಾಟಕ ಸರಕಾರದ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮತ್ರಿಗಳು ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಅವರಿಗೆ ಮನವಿಯನ್ನು ಸಲ್ಲಿಸಿದರು..
ಇನ್ನುಳಿದ ದುಷ್ಕರ್ಮಿಗಳನ್ನು ಬಂಧಿಸಲು ಆಗ್ರಹಿಸಿದರು. ಮತ್ತು ಇದರ ಹಿಂದಿರುವ ಪ್ರಭಾವಿ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿಯುವಲ್ಲಿ ನೈಜ ತನಿಖೆ ಆಗಬೇಕು ಎಂದು ಮಾನ್ಯರಲ್ಲಿ ಮನವಿ ಸಲ್ಲಿಸಲಾಯಿತು.
ವರದಿ:- ರಾಜೇಶ್. ಎಸ್. ದೇಸಾಯಿ