ಹಾವೇರಿ: ಹೌದು ಶಿಗ್ಗಾಂವಿ ತಾಲೂಕಿನ ತಡಸ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಮಲಾನಗರ್ ಹತ್ತಿರ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು ಆ ಸ್ಥಳಕ್ಕೆ ಇಂದು ಕಂದಾಯ ಇಲಾಖೆ ಅಧಿಕಾರಿಗಕೊಡನೆ ದಾಳಿ ನಡೆಸಲಾಗಿದೆ.

ತಡಸ ಹತ್ತಿರ ಕಮಲಾನಗರ ವ್ಯಾಪಿಗೆ ಬರುವ ಆಸ್ತಿ ನಂಬರ್ 70/1 ರಲ್ಲಿ ಅಕ್ರಮವಾಗಿ ಭೂಮಿಯ ಗರ್ಭವನ್ನ ಭಗಿದು ತಿನ್ನುತ್ತಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ
ಆಸ್ತಿಯ ಮಾಲೀಕರಾದ ಮಾರುತಿ ನಾಗಪ್ಪ ಪೂಜಾರ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಆ ಆಸ್ತಿಯನ್ನ ಸರ್ಕಾರದ ಆಸ್ತಿ ಎಂದು ಪಹಣಿ ಮಾಡುತ್ತೇವೆ ಎಂದು ತಡಸ ಗ್ರಾಮ ಲೆಕ್ಕಾಧಿಕಾರಿ ಕಿರಣ್ ಹೇಳಿದ್ದಾರೆ.
ಸುಮಾರು 1 ಎಕ್ಕರೆ ಜಾಗದಲ್ಲಿ ಮರುಳ ಮಾಫಿಯಾ ದಂದೆಯನ್ನ ಮಾಡಲಾಗುತ್ತಿದ್ದು ಅವರ ವಿರುದ್ಧ ತಡಸ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡುತ್ತೇವೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ
ಹಾಗೆ ಗಣಿಗಾರಿಕೆ ನಡೆಯುತಿದ್ದ ಜಾಗದಲ್ಲಿ 2 ಯಂತ್ರಗಳಿದ್ದು ಅವುಗಳನ್ನ ಸಿಜ್ ಮಾಡಲಾಗಿದೆ.
ಹಾಗೆ ಮುಂದಿನ ಎಲ್ಲ ಮಾಹಿತಿಯನ್ನ ನಾವು ಪ್ರೆಸ್ ಮೀಟ್ ನಲ್ಲಿ ನೀಡುತ್ತೇವೆ ಎಂದು ಗ್ರಾಮ ಲೆಕ್ಕಾ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ.
ವರದಿ: ರಮೇಶ್ ತಾಳಿಕೋಟಿ




