ದೆಹಲಿ: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೪ ನೇ ರೋಚಕ ಹಣಾಹಣಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ೧ ರನ್ನಿಂದ ಸೋಲಿಸಿ ಪಾಯಿಂಟ್ ಖಾತೆಯನ್ನು ತೆರೆಯಿತು.
ಇಲ್ಲಿನ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಗೆಲ್ಲಲು ೨೧೧ ರನ್ ಗಳಿಸಬೇಕಿದ್ದ ದೆಹಲಿ ಕ್ಯಾಪಿಟಲ್ಸ್ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿತು. ಅಂತಿಮವಾಗಿ ೧ ರನ್ನಿಂದ ಪರಾಭವಗೊಂಡಿತು. ಆದರೆ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತು. ಸಮೀರ ರಿಜ್ವಿ ಸೊನ್ನೆ ಸುತ್ತಿದ್ದು, ಡೆವಿಡ್ ಮಿಲ್ಲರ್ ಮೂರ್ಖತನದ ತಪ್ಪು ಮಾಡಿದ್ದು, ದೆಹಲಿ ತಂಡದ ಸೋಲಿಗೆ ಕಾರಣವಾಯಿತು. ಕೆ.ಎಲ್. ರಾಹುಲ್ ಹೋರಾಟ ವ್ಯರ್ಥವಾಯಿತು.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೪ ವಿಕೆಟ್ಗೆ ೨೧೦
ಶುಭಮಾನ್ ಗಿಲ್ ೭೦ ( ೪೫ ಎಸೆತ, ೪ ಬೌಂಡರಿ, ೫ ಸಿಕ್ಸರ್)
ವಾಷಿಂಗ್ಟನ್ ಸುಂದರ್ ೫೫ (೩೨ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಜೋಷ್ ಬಟ್ಲರ್ ೫೨ (೨೭ ಎಸೆತ, ೩ ಬೌಂಡರಿ, ೫ ಸಿಕ್ಸರ್)
ಲುಂಗಿ ನಿಗಡಿ ೨೪ ಕ್ಕೆ ೧, ಮುಖೇಶ್ ಕುಮಾರ್ ೫೫ ಕ್ಕೆ ೨
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೮ ವಿಕೆಟ್ಗೆ ೨೦೯
ಕೆ.ಎಲ್. ರಾಹುಲ್ ೯೨ ( ೫೨ ಎಸೆತ, ೧೧ ಬೌಂಡರಿ, ೪ ಸಿಕ್ಸರ್)
ಡೆವಿಡ್ ಮಿಲ್ಲರ್ ೪೧ ( ೨೦ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಪಾತುಮ್ ನಿಶಾಂಕಾ ೪೧ (೨೪ ಎಸೆತ, ೬ ಬೌಂಡರಿ, ೧ ಸಿಕ್ಸರ್)
ರಷೀದ್ ಖಾನ್ ೧೭ ಕ್ಕೆ ೩, ಪ್ರಸಿದ್ಧ ಕೃಷ್ಣ ೫೨ ಕ್ಕೆ ೨)
ಗುಜರಾತ್ ಟೈಟನ್ಸ್ ಗೆ ೧ ರನ್ನಿಂದ ರೋಚಕ ಜಯ




