ಇಳಕಲ್:-ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿರುವ ಅಲ್ ಹಾಜ್ ಉಸ್ಮಾನ್ ಗನಿ ಹುಮನಾಬಾದ್, ಚೇರ್ಮನ್ನರಾಗಿರುವ ಅಲ್ ಹಾಜ್ ಮೋಹಿಯುದ್ದೀನ್ ಭಾಷಾ ಹುಣಸಗಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಗಡಿಗರು, ದೈಹಿಕ ಶಿಕ್ಷಕರಾಗಿರುವ ಸದ್ದಾಂ ಹುಸೇನ್ ವಾಲಿಕಾರ್ ಗುರುಗಳಿಗೆ ಮತ್ತು ವಾಲಿಬಾಲ್ ತಂಡದ ನಾಯಕನಾಗಿರುವ ಸುಫಿಯಾನ್ ಪಟೇಲ್ (10th ವಿದ್ಯಾರ್ಥಿ) ಇವರಿಗೆ ಸನ್ಮಾನಿಸಿದರು.
ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲಾ ಪ್ರೌಢ ವಿಭಾಗದ ವಾಲಿಬಾಲ್ ಆಟಗಾರರನ್ನು , ದೈಹಿಕ ಶಿಕ್ಷಕರನ್ನು, ಮಾರ್ಗದರ್ಶಕರಾದ ಅಸ್ಲಮ್ ಕರಡಿ ಹಾಗೂ ಸಾಹಿಲ್ ಇವರಿಗೆ ಸಿಹಿ ತಿನಿಸುವುದರ ಮೂಲಕ ಶುಭ ಕೋರಿ, ರಾಜ್ಯಮಟ್ಟದಲ್ಲೂ ನಮ್ಮ ಸಂಸ್ಥೆಯ ಹೆಸರಿನ ಕೀರ್ತಿಯ ಪತಾಕೆಯನ್ನು ಹಾರಿಸಲೆಂದು ಎಲ್ಲ ಗಣ್ಯರು ಹಾರೈಸಿದರು ಎಂದು ಐಡಿಯಲ್ ಶಾಲೆಯ ಮುಖ್ಯ ಗುರುಮಾತೆಯರಾದ ಶ್ರೀಮತಿ ಎಂ ಜಿ ಅಕ್ಕಲಕೋಟ ಇವರು ವರದಿಗಾರರಿಗೆ ತಿಳಿಸಿದರು.
ವರದಿ :-ದಾವಲ್ ಶೇಡಂ




