Ad imageAd image

ಶ್ರೀ ಶಿವಶರಣ ಸಿಂದಗೇರಿ ನೀಲಮ್ಮ ತಾಯಿ ಸಿದ್ಧಾರೂಢ ಮಠ ಮಿಟ್ಟಿ ಮಲ್ಕಾಪುರ ಲಾಳಗಂಡ ಸಮುದಾಯದವರಿಂದ ಮಠದ ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ 

Bharath Vaibhav
ಶ್ರೀ ಶಿವಶರಣ ಸಿಂದಗೇರಿ ನೀಲಮ್ಮ ತಾಯಿ ಸಿದ್ಧಾರೂಢ ಮಠ ಮಿಟ್ಟಿ ಮಲ್ಕಾಪುರ ಲಾಳಗಂಡ ಸಮುದಾಯದವರಿಂದ ಮಠದ ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ 
WhatsApp Group Join Now
Telegram Group Join Now

ರಾಯಚೂರು :-ವ್ಯಾಪ್ತಿಯಲ್ಲಿ ಬರುವ ಮಿಟ್ಟಿ ಮಲ್ಕಾಪುರ ಶ್ರೀ ಸಿದ್ಧಾರೂಢ ಮಠದ ಲಾಲಗೊಂಡ ಸಮಾಜದ ಮಹಾ ಗುರುಗಳಾದ ಶ್ರೀ ಪರಮಪೂಜ್ಯ ನಿಜಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಲಾಳಗೊಂಡ ಸಮುದಾಯದ ಜಿಲ್ಲಾಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಸಮ್ಮುಖದಲ್ಲಿ ಮಹತ್ವದ ಸಭೆಯನ್ನು ಚರ್ಚಿಸಲಾಯಿತು .

ಲಾಲಗೊಂಡ ಸಮುದಾಯದ ಪ್ರತಿ ಜಿಲ್ಲೆಗಳಲ್ಲಿ ತಾಲೂಕಿನಲ್ಲಿ ಮತ್ತು ಗ್ರಾಮಗಳಲ್ಲಿ ನಮ್ಮ ಸಮುದಾಯ ಜನರು ಎಷ್ಟು ಇರುತ್ತಾರೋ ಅನ್ನುವುದನ್ನು ತಮ್ಮ ತಮ್ಮ ಗ್ರಾಮಗಳಲ್ಲಿ ಆನ್ಲೈನ್ ಮುಖಾಂತರ ಅರ್ಜಿಗಳಲ್ಲಿ ಹೆಸರುಗಳನ್ನು ನಮೂದಿಸಿ ಆ ಗ್ರಾಮವನ್ನು ಆನ್ಲೈನಲ್ಲಿ ನೋಡಿದಾಗ ಆ ಗ್ರಾಮದಲ್ಲಿ ಲಿಂಗಾಯತ ಸಮುದಾಯದವರು ಹೆಣ್ಣು ಮತ್ತು ಗಂಡು ಮತ್ತು ಮಕ್ಕಳು ಎಷ್ಟು ಜನ ಇದ್ದಾರೆ ಎನ್ನುವ ಹಾಗೆ ಈ ರೀತಿ ಒಂದು ಅನುಕೂಲ ಮಾಡಿಕೊಳ್ಳಬೇಕು.

ಮತ್ತು ಶ್ರೀ ಸಿದ್ಧಾರೂಢ ಮಠಕ್ಕೆ ಒಬ್ಬ ಮರಿದೇವರನ್ನು ನೇಮಕ ಮಾಡುವುದು ಮತ್ತು ಮಠದ ಸ್ಥಳದಲ್ಲಿ ಶಾಲಾ ಕಟ್ಟಡ ಮತ್ತು ಅನ್ನದಾಸೋಹ ಪ್ರತಿ ಅಮಾವಾಸ್ಯೆಗೆ ಪೂಜಾ ಕಾರ್ಯಕ್ರಮಗಳು ಮತ್ತು ಲಾಳಗೊಂಡ ಸಮುದಾಯದ ಮತ್ತು ಸರ್ವ ಸಮುದಾಯದ ಭಕ್ತರು ಬಂದವರಿಗೆ ಇರುವುದಕ್ಕೆ ವ್ಯವಸ್ಥೆ ಇವೆಲ್ಲ ಅಭಿವೃದ್ಧಿಗಳ ಬಗ್ಗೆ ಚರ್ಚಿಸಲಾಯಿತು. ಮತ್ತು ಶ್ರೀ ಸಿದ್ಧಾರೂಢ ಮಠಾಧೀಶರಾದ ನಿಜಾನಂದ ಸ್ವಾಮಿಗಳಿಗೆ. ಎಲ್ಲಾ ಭಕ್ತರು ಸೇರಿ ಇನೋವಾ ಆಗಲಿ ಅಥವಾ ಫಾರ್ಚುನರ್ ಕಾರ್ ಆಗಲಿ ಒಂದು ಕಾರಿನ ವ್ಯವಸ್ಥೆಯನ್ನು ಮಾಡಲಾಯಿತು.

ಮತ್ತು ಮುಂದಿನ ತಿಂಗಳ  20/ 10/ 2014ರಂದು ಮತ್ತೆ ಶ್ರೀ ಸಿದ್ಧಾರೂಢ ಮಠ ಮಿಟ್ಟೆ ಮಲ್ಕಾಪುರದಲ್ಲಿ ಮತ್ತೆ ಸಭೆ ಕರೆಯಲಾಗುತ್ತಿದೆ ಈಗಾಗಲೇ ಹೇಳಿದ ವಿಷಯದಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಲಾಳ ಗಂಡ ಸಮಾಜದ ಜಿಲ್ಲಾಧ್ಯಕ್ಷ ಆಲ್ದಾಳ ವೀರಭದ್ರಪ್ಪಗೌಡ. ಚಂದ್ರಶೇಖರ ಗೌಡ.
ಸನಾ ಬಾಳ. ಪಂಪನಗೌಡ. ಮಾಂತೇಶ್ ಪಾಟೀಲ್.ಸಿದ್ದಲಿಂಗಪ್ಪ ವಕೀಲರು. ಜಗದೀಶ್ ವಕೀಲರು ಲಾಳಗೊಂಡ ಸಮುದಾಯದ ಜಿಲ್ಲೆಯ ಎಲ್ಲಾ ತಾಲೂಕಿನ. ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

ವರದಿ:-ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!