Ad imageAd image

ರಾಣಿ ಬೆಳವಡಿ ಮಲ್ಲಮ್ಮಳಿಗೆ ಸಂಬಂಧಪಟ್ಟ ಪ್ರಮುಖ ಹೊಸ ಶಿಲಾ ಶಾಸನ ಪತ್ತೆ

Bharath Vaibhav
ರಾಣಿ ಬೆಳವಡಿ ಮಲ್ಲಮ್ಮಳಿಗೆ ಸಂಬಂಧಪಟ್ಟ ಪ್ರಮುಖ ಹೊಸ ಶಿಲಾ ಶಾಸನ ಪತ್ತೆ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ: ಛತ್ರಪತಿ ಶಿವಾಜಿ ಮಹಾರಾಜರ ಸೈನಿಕರು ಅಟ್ಟಿಸಿಕೊಂಡು ಹೋದ ಗೋಹುಗಳನ್ನು ಬಿಡಿಸಿಕೊಂಡು ಬರುತ್ತಿರುವ ಶಿಲಾಶಾಸನ ಪತ್ತೆಯಾಗಿದೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಅಪ್ಪಣ್ಣ ಹುಂಬಿಯವರು ಮಗಳ ಜೊತೆ ಗ್ರಾಮದ ಹನುಮಂತ ದೇವರಿಗೆ ಹೋದಾಗ 12 ವರ್ಷದ ಮಗಳು ಲಕ್ಷ್ಮಿ ಹುಂಬಿ ಆ ಶಾಸನವನ್ನು ನೋಡಿ ಅಪ್ಪಾಜಿ , ಈ ಕಲ್ಲಿನಲ್ಲಿ ಬೆಳವಡಿ ಮಲ್ಲಮ್ಮ ಗೋವುಗಳನ್ನು ಬಿಡಿಸಿಕೊಂಡು ಬರುವ ಮೂರ್ತಿಯನ್ನು ಕೆತ್ತಲಾಗಿದೆ ನೋಡು ಎಂದು ತೋರಿಸಿದರು ಆವಾಗ ದಿಟ್ಟಿಸಿ ನೋಡಲಾಗಿ ಆ ಶಾಸನದಲ್ಲಿ ರಾಣಿ ಮಲ್ಲಮ್ಮ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿರುವ ದೃಶ್ಯವು ಕೆತ್ತನೆ ರೂಪದಲ್ಲಿ ಇದೆ.

ಈ ಸಂದರ್ಭದಲ್ಲಿ ಊರಿನ ಹಿರಿಯರ ಗಮನಕ್ಕೆ ತರಲಾಗಿ ಗ್ರಾಮದ ಹಿರಿಯರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿ ಹನುಮಂತ ದೇವರ ದೇವಸ್ಥಾನದ ಮುಂಭಾಗದಲ್ಲಿ ಇರುವ ಈ ಒಂದು ಶಿಲೆಯನ್ನು ಗ್ರಾಮದ ಜನರು ಭಕ್ತಿಯಿಂದ ಶನಿದೇವನೆಂದು ಪೂಜಿಸುತ್ತಿದ್ದರು ಯಾರೇರಿಗೂ ಇದುವರೆಗೂ ಇದು ಸಂಬಂಧಪಟ್ಟ ಶಿಲಾಶಾಸನವೆಂಬುದು ಕಂಡಿಲ್ಲ ಈ ಮಗು ದೇವರಿಗೆ ಬಂದಾಗ ಮಲ್ಲಮ್ಮಳು ಗೋವುಗಳನ್ನು ಬಿಡಿಸಿಕೊಂಡು ಬಂದಿದ್ದಳು ಎಂಬ ವಿಷಯ ಮಗುವಿನ ಮನಸಲ್ಲಿರುವುದರಿಂದ ಆ ಮಗು ಸೂಕ್ಷ್ಮವಾಗಿ ಅವಲೋಕಿಸಿ ಅವರ ತಂದೆಗೆ ತಿಳಿಸಿದ್ದಾಳೆ ಮಲ್ಲಮ್ಮಳ ಇತಿಹಾಸಕೆ ಸಂಬಂಧಪಟ್ಟಂತ ಶಿಲಾ ಶಾಸನವನ್ನು ಗುರುತು ಮಾಡಿದ ಕೀರ್ತಿ ಲಕ್ಷ್ಮಿ ಹುಂಬಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು ಗ್ರಾಮ ಪಂಚಾಯತ್ ಸದಸ್ಯ ಬಿ ಜಿ ದೇಗಾವಿ ರಾಚಯ್ಯ ಸ್ವಾಮಿಗಳು ಶಿಕ್ಷಕರಾದ ಎಸ್ಎಂ ಕರಿಕಟ್ಟಿ ಮಾತನಾಡಿ ಈ ಒಂದು ಶೀಲಾ ಶಾಸನವನ್ನು ಹೊಸಗುಡಿ ನಿರ್ಮಾಣ ಮಾಡುವಾಗ ನಾವು ಈ ಈ ಕಲ್ಲನ್ನು ಒಂದು ಕಟ್ಟೆ ನಿರ್ಮಾಣ ಮಾಡಿ ಅದರಲ್ಲಿ ಪ್ರತಿಷ್ಠಾಪನೆ ಮಾಡಿದೆವು .

ಆದರೆ ಇದು ಮಲ್ಲಮ್ಮನಿಗೆ ಸಂಬಂಧಪಟ್ಟದ್ದು ಎಂಬುದು ನಮಗೂ ಗೊತ್ತಿಲ್ಲ ಆ ದೇವರು ಮಗುವಿನ ಮುಖಾಂತರ ಈ ಒಂದು ಐತಿಹಾಸಿಕ ಶಿಲ್ಪಕಲೆಯನ್ನು ನಮಗೆ ದೊರಕಿಸಿಕೊಟ್ಟಿರುವುದು ನಮ್ಮ ಬೆಳವಡಿಯ ಜನರ ಪುಣ್ಯ ಈ ಮಗುವಿಗೆ ಗ್ರಾಮಸ್ಥರ ವತಿಯಿಂದ ನಾವು ಶುಭ ಹಾರೈಸುತ್ತೇವೆ ಎಂದು ಹೇಳಿದರು ಗಿರಿಮಲಪ್ಪ ಬಳೆಗಾರ ಡಾಕ್ಟರ್ ಡಿ ವೈ ಗರಗದ ಮಾತನಾಡಿ ಲಕ್ಷ್ಮಿ ಹುಂಬಿ ಅವರ ತಂದೆ ಮಲ್ಲಮ್ಮಳ ಅಭಿಮಾನಿ ಅವರ ಮಗಳು ದೇವಸ್ಥಾನದ ಮುಂಭಾಗದಲ್ಲಿರುವ ಮಲ್ಲಮ್ಮಳ ಶಿಲೆಯನ್ನು ಮಲ್ಲಮ್ಮನ ಆಶೀರ್ವಾದ ಇರುವುದರಿಂದ ಈ ಮಗುವಿನ ಕಣ್ಣಿಗೆ ಕಾಣಿಸಿಕೊಂಡಿದೆ ದೇವರಿಗೆ ಬಂದಾಗ ಈ ಶಿಲ್ಪ ವನ್ನು ನೋಡಿ ತಂದೆಗೆ ತಿಳಿಸಿದಳು ನಿಜವಾಗಲೂ ಆ ಲಕ್ಷ್ಮಿಯನ್ನು ನಾವು ಗ್ರಾಮಸ್ಥರು ಪರವಾಗಿ ಸತ್ಕರಿಸುತ್ತೇವೆ ಎಂದು ಹೇಳಿದರು.

ಈರಪ್ಪ ಶೀಲವಂತರ ಪ್ರಕಾಶ್ ಬಳಿಗಾರ ಶಂಕ್ರಯ್ಯ ಹಿರೇಮಠ್ ಮಾತನಾಡುತ್ತಾ ಲಕ್ಷ್ಮಿ ಹುಂಬಿಯವರ ತಂದೆಯು ಹಾಗೂ ಅವರ ಮನೆತನ ಮಲ್ಲಮ್ಮನ ಬಗ್ಗೆ ಅಪಾರವಾದಂತಹ ಒಂದು ಗೌರವ ಹೊಂದಿದೆ ಆ ಕಾರಣಕ್ಕಾಗಿ ಮಲ್ಲಮ್ಮ ತಾಯಿ , ಮಗುವಿನ ಮನಸ್ಸಿನಲ್ಲಿ ಬಂದು ಆ ಶಿಲೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಮಲ್ಲಮ್ಮ ತಾಯಿಯ ವೀರಭದ್ರೇಶ್ವರ ಅನುಗ್ರಹ ಮಗುವಿನ ಮೇಲಿದೆ ರಾಣಿ ಮಲ್ಲಮ್ಮಳ ಈ ಒಂದು ಶಿಲಾ ಶಾಸನ ದೊರಕಿರುವದು ನಮ್ಮ ಇತಿಹಾಸಕ್ಕೆ ಒಂದು ಕೊಡುಗೆಯಾಗಿದೆ ಸಂಗಯ್ಯ ಚಚಡಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಅಪ್ಪಣ್ಣ ಹುಂಬಿ ದುಂಡಪ್ಪ ಗೋದಳ್ಳಿ ಮಲ್ಲಿಕಾರ್ಜುನ್ ಹುಂಬಿ ಎಲ್ಲರೂ ಆ ಶಾಸನವನ್ನು ಕಂಡುಹಿಡಿದ ಲಕ್ಷ್ಮಿ ಪ್ರಕಾಶ್ ಹುಂಬಿ ಇವಳನ್ನು ಗ್ರಾಮಸ್ಥರು ಪರವಾಗಿ ಸತ್ಕರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ :ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!