ಗೋಕಾಕ : ಕೊಣ್ಣೂರ ಪಟ್ಟಣದ ಪುರಸಭೆಯ ಮುಂಭಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೀರು ಸರಬರಾಜು ನೌಕರರನ್ನು ಹೊರತು ಪಡಿಸಿ ಎಲ್ಲ ಪೌರನೌಕರರು ಅನಿರ್ದಿಷ್ಟವಾದಿ ಮುಷ್ಕರವನ್ನು ನಡೆಸಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಶಾಖಾ ಸಂಘದ ಸ್ಥಳೀಯ ಅದ್ಯಕ್ಷ ಮಲ್ಲಪ್ಪ ಪೆದನ್ನವರ ಇವರು ಮಾತನಾಡಿ ಎಲ್ಲ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಒತ್ತಾಯಿಸುತ್ತಲೇ ಬಂದಿದೆ. ಆದರೆ ಇದುವರೆಗೆ ಪೌರಾಡಳಿತ ಸಚಿವರು, ಇಲಾಖೆದ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶಕರು ಸೇರಿದಂತೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ.
ಹಾಗಾಗಿ ಸಂಘದ ಶಾಖಾ ಸದಸ್ಯರು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದು ಇಂದಿನಿಂದ ಬೇಡಿಕೆ ಈಡೆರುವರೆಗೆ ಮುಷ್ಕರವನ್ನು ನೆಡೆಸುತ್ತೇವೆ ಎಂದು ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿ ತಿಳಿಸಿದರು.
ಇನ್ನು ಮನವಿ ಸ್ವೀಕರಿಸಿ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರು ತಮ್ಮ ಬೇಡಿಕೆ ಈಡೆರಿಸವುಂತೆ ಸರಕಾರಕ್ಕೆ ನಾವು ಕೂಡ ವಿನಂತಿಸುತ್ತೇವೆ.ಆದರೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮತ್ತೆ ಸೇವೆಯಲ್ಲಿ ತೊಡಗಲು ಎಲ್ಲ ಪೌರಕಾರ್ಮಿಕರಲ್ಲಿ ವಿನಂತಿಸಿಕೊಂಡರು.
ಈ ಮುಷ್ಕರದಲ್ಲಿ ಅಹಿತಕರ ಘಟನೆ ನಡೆಯದಂತೆ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ, ಎ,ಎಸ್,ಐ, ಎಸ್,ಕೆ ಪಾಟೀಲ, ಸಿಬ್ಬಂದಿಗಳಾದ ಎಚ್,ಡಿ,ಗೌಡಿ, ಹಾಗೂ ಎಲ್ಲ ಪೌರ ನೌಕರರು,ಕಂಪ್ಯೂಟರ ಆಪರೇಟರಗಳು ಇನ್ನೂಳಿದವರು ಬಾಗಿಯಾಗಿದ್ದರು.
ವರದಿ : ಮನೋಹರ ಮೇಗೇರಿ




