ಬಸವನ ಬಾಗೇವಾಡಿ : ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ತಾಲೂಕು ಆಡಳಿತ ಸೌದದ ಮುಂಭಾಗ ಧರಣಿ ಕುಳಿತ ತಾಲೂಕ ಗ್ರಾಮ ಆಡಳಿತ ಅಧಿಕಾರಿಗಳು, ನಮಗೆ ರಾಜ್ಯ ಸರ್ಕಾರ ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಿ ಕೊಡುತ್ತಿಲ್ಲ ನಾವು ಗ್ರಾಮದ ತಳಮಟ್ಟದಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ನಾವು ಹಳ್ಳಿಗಳಿಗೆ/ಗ್ರಾಮಗಳಿಗೆ ಹೋದಾಗ ನಮಗೆ ಕೂಡಲಕ್ಕೆ ಒಂದು ಕೋಣೆಯು ಇಲ್ಲ ನಾವು ಗ್ರಾಮಕ್ಕೆ ಹೋದಾಗ ಗುಡಿಯಲ್ಲಿ ಇನ್ನು ಯಾವುದೋ ಕಟ್ಟೆ ಮೇಲೆ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿಗೆ ಇದೆ ಈ ಹಿಂದೆಯೂ ಕೂಡ ನಾವು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ.
ಕೊಟ್ಟರು ಸರಕಾರ ನಮಗೆ ಮೂರು ತಿಂಗಳ ಕಾಲಾವಕಾಶ ಕೇಳಿತ್ತು ಈಗ ಮೂರು ತಿಂಗಳ ಕಳೆದು ಆರು ತಿಂಗಳಾದರೂ ಕೂಡ ರಾಜ್ಯ ಸರ್ಕಾರ ನಮಗೆ ಯಾವುದೇ ಮೂಲಭೂತ ಸೌಕರ್ಯ ಒದಿಸಿ ಕೊಡುತ್ತಿಲ್ಲ ಹೀಗೆ ಸರ್ಕಾರ ನಮಗೆ ಸುಳ್ಳು ಹೇಳುತ್ತಾ ಹೋದರೆ ನಾವು ಹಳ್ಳಿಗಳಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟವಾಗುತ್ತದೆ ಅದಕ್ಕಾಗಿ ಆದಷ್ಟು ಬೇಗನೆ ಸರ್ಕಾರ ಎಚ್ಚೆತ್ತಿಕೊಂಡು ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕು ಒಂದು ವೇಳೆ ಕೊಡದೆ ಹೋದಲ್ಲಿ ನಾವು ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.
ಎಸ್ ಹೆಚ್ ಶಿರಶ್ಯಾಡ, ಎಸ್ ಆರ್ ಕುಂಟೋಜಿ, ಎನ್ ಎಂ ಪಾಟೀಲ್, ಬಿ ಎಸ್ ಗಿದ್ದಿಮನಿ, ಸಂಜು ಜಾಧವ,
ಎ ಆರ್ ಘಂಟಿ, ಇದೇ ಸಂದರ್ಭದಲ್ಲಿ ತಾಲೂಕಿನ ಅನೇಕ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು..




