———————————-ರಣಜಿ ಕ್ರಿಕೆಟ್ : ಕರುಣ್ ನಯ್ಯರ ಪಂದ್ಯ ಶ್ರೇಷ್ಠ
ತಿರುವನಂತಪುರಂ: ಕರ್ನಾಟಕ ಕ್ರಿಕೆಟ್ ತಂಡವು ಆತಿಥೇಯ ಕೇರಳ ವಿರುದ್ಧ ಇಲ್ಲಿ ನಡೆದ ಎಲೈಟ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 164 ರನ್ ಗಳಿಂದ ಗೆಲ್ಲುವ ಮೂಲಕ ಬಿ. ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಮೊಹ್ಸಿನ್ ಖಾನ್ 29 ಕ್ಕೆ 6
ಇಲ್ಲಿನ ಮಂಗಲಪುರಂ ಕೆಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಲ್ಕನೇ ದಿನವಾದ ಇಂದು ಫಾಲೋ ಆನ್ ಪಡೆದು ತನ್ನ ದ್ವಿತೀಯ ಸರದಿ ಆರಂಭಿಸಿದ್ದ ಕೇರಳ ತಂಡವನ್ನು 184 ರನ್ ಗಳಿಗೆ ಆಲೌಟ್ ಮಾಡಿ ಪಂದ್ಯದಿಂದ ಪೂರ್ಣ 7 ಪಾಯಿಂಟ್ ಪಡೆಯಿತು. ಹೀಗಾಗಿ ಮೂರು ಪಂದ್ಯಗಳಿಂದ 11 ಅಂಕ ಪಡೆದ ರಾಜ್ಯ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಕರ್ನಾಟಕ ಪರವಾಗಿ ಮೊಹ್ಸಿನ್ ಖಾನ್ 29 ಕ್ಕೆ 6 ವಿಕೆಟ್ ಪಡೆದು ಮಿಂಚಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 586 ಡಿಕ್ಲೇರ್
ಕೇರಳ 238 ( ವಿದ್ವತ್ ಕಾವೇರಪ್ಪ 42 ಕ್ಕೆ 4, ವಿಜಯಕುಮಾರ್ ವೈಶ್ಚಾಕ್ 62 ಕ್ಕೆ 3) ಹಾಗೂ 184
ಮೊಹ್ಸಿನ್ ಖಾನ್ 29 ಕ್ಕೆ 6




