ಚಾಮರಾಜನಗರ: ಜಿಲ್ಲೆಯ ಯಳಂದೂರಿನ ಶ್ರೀ ಭೂಲಕ್ಷ್ಮೀ ವರಾಹಸ್ವಾಮಿ ದೇವಸ್ಥಾನ ಆವರಣದಲ್ಲಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಯಳಂದೂರು ಪಟ್ಟಣದ ಹೃದಯ ಭಾಗದಲ್ಲಿ ನೂತನವಾಗಿ ವೈದ್ಯ ದಂಪತಿಗಳಿಂದ ಜೀರ್ಣೋದ್ಧಾರಗೊಂಡಿರುವ ಶ್ರೀ ಭೂಲಕ್ಷ್ಮೀ ವರಾಹಸ್ವಾಮಿಯವರು, ಶ್ರೀ ಚೆನ್ನಕೇಶವ ಸ್ವಾಮಿಯವರು, ಶ್ರೀ ಮಹಾಲಕ್ಷ್ಮೀ ಅಮ್ಮನವರು, ಶ್ರೀ ಮೂಲೆ ಗಣಪತಿ ಹಾಗೂ ವಿಮಾನ ಗೋಪುರ, ಮುಖಮಂಟಪಗಳ ಮಹಾ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹಾಸಂಪ್ರೋಕ್ಷಣಾ ಮಹೋತ್ಸವ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಇದೆ ಆಗುಸ್ಟ್ ತಿಂಗಳ 09,10 ಮತ್ತು 11ನೇ ತಾರೀಕಿನಂದು ಹಮ್ಮಿಕೊಂಡಿದ್ದು ಸಕಲ ಭಕ್ತ ವೃಂದ, ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಿ ಎಂದು ಸುದ್ದಿ ಘೋಷ್ಠಿ ಮುಖಾಂತರ ಅಧ್ಯಕ್ಷರು ಡಾ. ಶಶಿಕಲಾ ರಮೇಶ್ ಗೌರವ ಅಧ್ಯಕ್ಷರು ಡಾ.ರಮೇಶ್ ಉಡುಪ ಹಾಗೂ ಸಮಿತಿಯ ಪದಾಧಿಕಾರಿಗಳು ಮೂರ್ತಿ,ನಂಜಶೆಟ್ಟಿ, ಶ್ರೀನಿವಾಸ್, ಸಂತೋಷ್ ಹಾಗೂ ಅರ್ಚಕ ಮುರುಳಿ ರವರು ಮಾತನಾಡಿ ಆಹ್ವಾನ ಮಾಡಿದರು.
ವರದಿ: ಸ್ವಾಮಿ ಬಳೇಪೇಟೆ




