Ad imageAd image

ಸ್ವ ಗ್ರಾಮದ ಜನರಿಗೆ ಉಚಿತ ನೀರು ಸರಬರಾಜು ಮಾಡಿದ ಐಪಿಎಸ್ ಅಧಿಕಾರಿ

Bharath Vaibhav
ಸ್ವ ಗ್ರಾಮದ ಜನರಿಗೆ ಉಚಿತ ನೀರು ಸರಬರಾಜು ಮಾಡಿದ ಐಪಿಎಸ್ ಅಧಿಕಾರಿ
WhatsApp Group Join Now
Telegram Group Join Now

ಐಗಳಿ: ಸ್ವ ಗ್ರಾಮದಲ್ಲಿ ಸಾರ್ವಜನಿಕರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಅಭಾವಕಂಡು ಅಥಣಿ ತಾಲೂಕಿನ ಐಗಳಿ ಗ್ರಾಮದ ಹೆಮ್ಮೆಯ ಪುತ್ರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಬೆಳಗಾವಿ ವಿಭಾಗೀಯ ಪೋಲಿಸ್ ಅಧಿಕಾರಿ ರವೀಂದ್ರ ಗಡಾದೆ ( ಐಪಿಎಸ್ ) ಅವರು ಸಿ ಕೆ ಜಿ ಫೌಂಡೇಶನ್ ವತಿಯಿಂದ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಆಯ್ಕೆಯಾದ ಮೇಲೆ ತಮ್ಮ ಸ್ವ ಗ್ರಾಮದ ಹೆಸರು ಹೇಳಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ನಮ್ಮ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ ಎಂದು ಗೊತ್ತಾದ ಕ್ಷಣದಿಂದ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಇರುವುದರಿಂದ ನಮ್ಮ ಗ್ರಾಮದಲ್ಲಿನ ತೆರದ ಬಾವಿ ಹಾಗೂ ಕೊಳವೆ ಬಾವಿಗಳು ಸಂಪೂರ್ಣ ಬತ್ತಿಹೋಗಿವೆ ದನಕರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ‌ ಅದರ ಜೊತೆಗೆ ರವೀಂದ್ರ ಗಡಾದೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ನೀಡುತ್ತಿರುವುದು ಸಾರ್ವಜನಿಕರಿಂದ ಪ್ರಶಂಸೆಗೆ.
ಯಲ್ಲಪ್ಪ ಮಿರ್ಜಿ. ಮಾಜಿ ತಾಲೂಕು ಪಂಚಾಯತಿ ಸದಸ್ಯರು ಐಗಳಿ,

ವರದಿ : ಆಕಾಶ ಮಾದರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!